Site icon Suddi Belthangady

ನಾರಾವಿ ವಲಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಕರಂಬಾರು ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ

ಶಿರ್ಲಾಲುವಿನಲ್ಲಿ ನಡೆದ ನಾರಾವಿ ವಲಯಮಟ್ಟದ ಖೋ ಖೋ ಪಂದ್ಯಾಟದಲ್ಲಿ ಕರಂಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಲಕರು ಪ್ರಥಮ ಸ್ಥಾನ ಹಾಗೂ ಬಾಲಕಿಯರು ದ್ವೀತಿಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ರಮೇಶ್ ಚಾವನ್, ಶಿಕ್ಷಕರುಗಳಾದ ಕಿರಣಕುಮಾರ್ ಕೆ ಯಸ್., ಸಾವಿತ್ರಿ, ದೀಪಶ್ರೀ, ಸದಾಶಿವ, ಸ್ವಾತಿ ಸಹಕರಿಸಿದರು.

ಶಾಲಾಭಿವೃದ್ಧಿಯ ಸಮಿತಿಯ ಅಧ್ಯಕ್ಷರಾದ ಪುಷ್ಪರಾಜ್ ಎಂ.ಕೆ. ಸಮಿತಿಯ ಸದಸ್ಯರಾದ ವೀರಪ್ಪ ಹಾಗೂ ಸದಸ್ಯರು ಸಹಕರಿಸಿದರು.

Exit mobile version