ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಅಚರಿಸಲಾಯಿತು.
ಶಾಲಾ ಮಕ್ಕಳಿಂದ ರಾಷ್ಟ್ರನಾಯಕರ ವೇಷಭೂಷಣದೊಂದಿಗೆ, ಸಿಂಹವೇಷ ಧಾರಿಗಳೊಂದಿಗೆ ಅಮೃತ ವರ್ಷಿಣಿ ಸಭಾoಗಣ ದಿಂದ ದೇವಸ್ಥಾನ ದ ವರೆಗೆ ಮೆರವಣಿಗೆ ನಡೆಸಲಾಯಿತು. ನಂತರ ಶಾಲೆಯಲ್ಲಿ ಧ್ವಜವಂದನೆಯನ್ನ ನಿವೃತ್ತ ಸೇನಾನಿ ಶ್ರೀಯುತ ಸುಧಾಕರ್ ಇವರು ನೆರವೇರಿಸಿ, ‘ಸೇನೆಗೆ ಯಾರ ಒತ್ತಾಯದಿಂದಲೂ ಸೇರಬಾರದು. ಸ್ವಯಂ ಆಸಕ್ತಿಯಿಂದ ಸೇರಬೇಕು. ದೇಶಸೇವೆ ಮಾಡುವುದು ಎಲ್ಲರ ಕರ್ತವ್ಯ ವಾಗಿದೆ’ಎಂದರು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಶ್ರೀ ಕಮಲ್ ತೇಜು ರಜಪೂತ್ ಮಾತನಾಡಿ ಸ್ವತಂತ್ರ್ಯ ಕ್ಕಾಗಿ ಹೋರಾಡಿದ ಮಹನೀಯರ ಬಗ್ಗೆ ಗುಣಗಾನ ಮಾಡಿದರು.
ಸಭಾಧ್ಯಕ್ಷರಾದ ಶಾಲಾ ಮುಖ್ಯ ಗುರುಗಳೂ ಆದ ಶ್ರೀ ಪಿ. ಸುಬ್ರಹ್ಮಣ್ಯ ರಾವ್ ಇವರು ಮಕ್ಕಳಿಗೆ ಬಾಲ್ಯದಲ್ಲಿಯೇ ದೇಶಪ್ರೇಮ ಬೆಳೆಯಬೇಕು. ಪ್ರತಿಯೊಬ್ಬರಿಗೂ ವೈಯಕ್ತಿಕ ಸ್ವಾತಂತ್ರ್ಯವಿದೆ.ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದರು.
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆಸಲಾದ ವಿವಿಧ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಿತು.
ಬಹುಮಾನದ ವಿಜೇತರ ಪಟ್ಟಿಯನ್ನು ಶ್ರೀಮತಿ ಪೂರ್ಣಿಮಾ ಜೋಷಿ ವಾಚಿಸಿದರು.ವಿದ್ಯಾರ್ಥಿಗಳಿಂದ ಭಾಷಣ ಮತ್ತು ದೇಶಭಕ್ತಿಗೀತೆ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳು ಪ್ರಾರ್ಥಿಸಿದ ಬಳಿಕ, ಶೇಖರ್ ಗೌಡ ಸ್ವಾಗತಿಸಿದರು.ಪೂರ್ಣಿಮಾ ವಂದನಾರ್ಪಣೆಗೈದ ಕಾರ್ಯಕ್ರಮವನ್ನು ಶೋಭಾ ನಿರೂಪಿಸಿದರು.
ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಶಾಲಾ ಆಡಳಿತ ಮಂಡಳಿ ಯವರು ಮಕ್ಕಳಿಗೆ ಸಿಹಿ ತಿಂಡಿಯ ವ್ಯವಸ್ಥೆ ಕಲ್ಪಿಸಿದ್ದರು.ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.ಮಕ್ಕಳ ಪೋಷಕರು ಭಾಗವಹಿಸಿದ್ದರು