Site icon Suddi Belthangady

ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣ ಕುರಿತು ವೀಡಿಯೋ ಕಾನ್ಪರೆನ್ಸ್ ಮೂಲಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ವಿಚಾರಧಾರೆ ಮಂಡನೆ

ಭಾರತದ ಸಿವಿಲ್ 20 ಮತ್ತು ಯೂತ್ 20 ವರ್ಕಿಂಗ್ ಗ್ರೂಪ್‌ಗಳ ಉ20 ಅಧ್ಯಕ್ಷತೆಯ ಭಾಗವಾಗಿ ಆಯೋಜಿಸಲಾದ ಚೇಂಜ್‌ಮೇಕರ್ 20 ಶೃಂಗಸಭೆಯು 60ಕ್ಕೂ ಹೆಚ್ಚು ದೇಶಗಳ ಯುವ ಬದಲಾವಣೆ ಮಾಡುವವರು, ನಾಯಕರು ಮತ್ತು ಪ್ರಭಾವಿಗಳಿಗೆ ಸಹಕರಿಸಲು, ಆವಿಷ್ಕರಿಸಲು ಮತ್ತು ಸುಸ್ಥಿರ ಪರಿಹಾರಗಳನ್ನು ಚಾಲನೆ ಮಾಡಲು ಜಾಗತಿಕ ವೇದಿಕೆಯಾಗಿದ್ದು ಈ ವೇದಿಕೆಯ ಮೂಲಕ ಆಯೋಜಿಸಲಾಗಿದ್ದ ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣದ ವಿಷಯದ ಕುರಿತು ಡಿ.ವೀರೇಂದ್ರ ಹೆಗ್ಗಡೆಯವರು ಆ.16ರ ಸಂಜೆ ಗಂಟೆ 6.00 ರಿಂದ 6.45ರ ವರೆಗೆ ವಿಸ್ಜತವಾಗಿ ವೀಡಿಯೋ ಕಾನ್ಪರೆನ್ಸ್ ಮೂಲಕ ತಮ್ಮ ವಿಚಾರಧಾರೆಯನ್ನು ಮಂಡಿಸಿದರು. ಸಾವಿರಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಸಕ್ತರು ಈ ವೀಡಿಯೋ ಕಾನ್ಪರೆನ್ಸ್‌ನಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

ಹೆಗ್ಗಡೆಯವರ ಭಾಷಣದ ನಂತರದ ಪ್ರಶ್ನೋತ್ತರದಲ್ಲಿ ಬಹಳಷ್ಟು ಆಸಕ್ತರು ಹೆಗ್ಗಡೆಯವರಲ್ಲಿ ಮಹಿಳೆಯ ಸಬಲೀಕರಣದ ಕುರಿತು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಹೆಗ್ಗಡೆಯವರು ನೀಡಿದರು. ಇದನ್ನು ಯುಟ್ಯೂಬ್‌ನಲ್ಲಿ (https://www.youtube.com/live/eLvFhhZvgz8?feature=share) ವೀಕ್ಷಿಸಬಹುದು.

ಎಲ್ಲಾ ರಂಗಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಪ್ರಸ್ತುತ ಆದ್ಯತೆಯಾಗಿರಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಲಿಂಗ ಸಮಾನತೆಯು ಸಮಾನತೆಯ ಸಮಾಜವನ್ನು ಸೃಷ್ಟಿಸುವುದು ಮಾತ್ರವಲ್ಲದೆ ದೇಶವು ಜಾಗತಿಕವಾಗಿ ಎದ್ದು ಕಾಣಲು ಸಹಾಯ ಮಾಡುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

Exit mobile version