Site icon Suddi Belthangady

ಪಿಲ್ಯ ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಪಿಲ್ಯ: 77ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವು ಆ.15 ರಂದು ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆ ಪಿಲ್ಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.ಡಾ.ಹರಿಪ್ರಸಾದ್ ಸುವರ್ಣ ಧ್ವಜಾರೋಹಣ ನೆರವೇರಿಸಿದರು.ಬಳಿಕ ವಿದ್ಯಾರ್ಥಿಗಳಿಂದ ಪಥಸಂಚಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ನಸೀರ್ ಅಹಮದ್ ಖಾನ್ ಪಿಲ್ಯ ಇವರು ವಹಿಸಿಕೊಂಡು ಪ್ರಾಸ್ತಾವಿಕ ಮಾತುಗಳನ್ನಾಡಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾದ ಡಾಕ್ಟರ್ ಹರಿಪ್ರಸಾದ್ ಸುವರ್ಣರವರು ನಾವು ಸ್ವಾತಂತ್ರ್ಯವನ್ನು ಹೇಗೆ ಗಳಿಸಿಕೊಡೆವು ಎಂಬುವುದರ ಬಗ್ಗೆ ಮಾಹಿತಿಯನ್ನು ಮಕ್ಕಳಿಗೆ ನೀಡಿದರು. ಇನ್ನೋರ್ವ ಅತಿಥಿಯಾದ ಕೃಷ್ಣಾನಂದ ಶೆಟ್ಟಿ, ನಿವೃತ್ತ ಸೈನಿಕರು ಇವರು ಮಕ್ಕಳಲ್ಲಿ ಯಾವ ರೀತಿ ಶಿಸ್ತು ಮೂಡಿಸಬೇಕು ಎಂದು ತಿಳಿಸಿದರು. ಈ ಸಂದರ್ಭ ನಿವೃತ್ತ ಸೈನಿಕರಾದ ಶ್ರೀಯುತ ಕೃಷ್ಣಾನಂದರವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.ಹಾಗೂ ಶಿಕ್ಷಕ ರಕ್ಷಕ ಸಮಿತಿಯ ಉಪಾಧ್ಯಕ್ಷರಾದ ವೀರೇಂದ್ರ ಜೈನರವರು ಮಾತನಾಡಿ ಮಕ್ಕಳ ಜೀವನದಲ್ಲಿ ದೇಶ ಪ್ರೇಮವನ್ನು ಮೂಡಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಮಿತಿಯ ಉಪಾಧ್ಯಕ್ಷರಾದ ಹರಿಣಾಕ್ಷಿ, ಶಿಕ್ಷಕ ರಕ್ಷಕ ಸಮಿತಿಯ ಸದಸ್ಯರಾದ ಧನಕೀರ್ತಿ ಜೈನ್, ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಯರಾದ ಕರುಣಾಕರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಾಜಿ ಕುರಿಯನ್ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿ ಶುಭ ಹಾರೈಸಿದರು.ತದನಂತರ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಕ್ಕಳ ಪೋಷಕರು ಕೂಡ ಭಾಗವಹಿಸಿದ್ದರು.ಈ ಕಾರ್ಯಕ್ರಮವನ್ನು ಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ಅಕ್ಷತಾ ಮತ್ತು ತಾಸ್ರಿಯ ನಿರೂಪಿಸಿದರು. 9ನೇ ತರಗತಿಯ ದ್ವಿತೀಕ್ಷ ಸ್ವಾಗತಿಸಿ 9ನೇ ತರಗತಿಯ ದೀಪೇಶ್ ವಂದಿಸಿದರು.

Exit mobile version