Site icon Suddi Belthangady

ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು: ಸಿಲ್ವರ್ ಜುಬಿಲಿ ಇಂಡಿಪೆಂಡೆನ್ಸ್ ಡೇ ಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಗಣನೀಯ ಸಾಧನೆ

ಮಡಂತ್ಯಾರು: ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ​​ವತಿಯಿಂದ ಮಂಗಳೂರಿನ ನೆಹರು ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡ ಸಿಲ್ವರ್ ಜುಬಿಲಿ ಇಂಡಿಪೆಂಡೆನ್ಸ್ ಡೇ ಕಪ್ ಪಂದ್ಯಾವಳಿಯಲ್ಲಿ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಮಹಿಳಾ ಫುಟ್‌ಬಾಲ್ ತಂಡವು ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಪುರುಷರ ಫುಟ್‌ಬಾಲ್ ತಂಡ ರನ್ನರ್ ಅಪ್ ಟ್ರೋಫಿಯನ್ನು ಪಡೆದುಕೊಂಡಿತು.

ಸೇಕ್ರೆಡ್ ಹಾರ್ಟ್ ಕಾಲೇಜು ಮಹಿಳಾ ತಂಡವು ಪಂದ್ಯಾವಳಿಯುದ್ದಕ್ಕೂ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿತು.ಅತ್ಯುತ್ತಮ ಸಾಂಘಿಕ ಪ್ರದರ್ಶನ ಮತ್ತು ವೈಯಕ್ತಿಕ ಪ್ರದರ್ಶನಗಳ ಮುಖಾಂತರ ಪಂದ್ಯಾಕೂಟದ ಚಾಂಪಿಯನ್ಸ್ ತಂಡವಾಗಿ ಹೊರಹೊಮ್ಮಿತು.ಸೇಕ್ರೆಡ್ ಹಾರ್ಟ್ ಕಾಲೇಜಿನ ಪುರುಷರ ತಂಡದ ಪ್ರದರ್ಶನ ಕೂಡ ಅಷ್ಟೇ ಶ್ಲಾಘನೀಯ.ತೀವ್ರ ಪೈಪೋಟಿಯ ಹೊರತಾಗಿಯೂ, ಅವರು ಫೈನಲ್ ತಲುಪುವಲ್ಲಿ ಯಶಸ್ವಿಯಾದರು, ಅಂತಿಮವಾಗಿ ಪಂದ್ಯಾವಳಿಯಲ್ಲಿ ರನ್ನರ್-ಅಪ್ ತಂಡವಾಗಿ‌ ಮೂಡಿಬಂತು.ಪೈನಲ್ ಪಂದ್ಯಾವಳಿಯಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜು ಮಹಿಳಾ ತಂಡವು ಮಂಗಳೂರಿನ‌ ಸಂತ ಅಲೋಶಿಯಸ್ ಕಾಲೇಜು ತಂಡವನ್ನು 2-0 ಅಂತರದ ಗೋಲಿನೊಂದಿಗೆ ಸೋಲಿಸಿ ವಿಜಯ ಪತಾಕೆಯನ್ನು ಹಾರಿಸಿದರೆ ಪುರುಷರ ತಂಡವು ಯೆನಪೋಯ ತಂಡದೆದುರು ಏಕೈಕ ಗೋಲಿನೊಂದಿಗೆ ಚಾಂಪಿಯನ್ ಪ್ರಶಸ್ತಿಯಿಂದ ಸ್ವಲ್ಪದರಲ್ಲೇ ವಂಚಿತರಾಗಿ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.ಸಿಲ್ವರ್ ಜುಬಿಲಿ ಇಂಡಿಪೆಂಡೆನ್ಸ್ ಡೇ ಕಪ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಮಹಿಳಾ ಮತ್ತು ಪುರುಷರ ತಂಡಗಳಿಗೆ ತಮ್ಮ ಫುಟ್ಬಾಲ್ ಪ್ರತಿಭೆಯನ್ನು ಪ್ರದರ್ಶಿಸಲು ಅತ್ಯುತ್ತಮ ವೇದಿಕೆಯನ್ನು ಒದಗಿಸಿತು.

ಕಾಲೇಜು ಆಡಳಿತ ಮಂಡಳಿ, ಸಂಚಾಲಕರು, ಪ್ರಾಂಶುಪಾಲರು, ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿ ವರ್ಗ, ವಿದ್ಯಾರ್ಥಿ ಸಮೂಹ ಮತ್ತು ಶಿಕ್ಷಕ ರಕ್ಷಕ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಸೇರಿದಂತೆ ಇಡೀ ಸೇಕ್ರೆಡ್ ಹಾರ್ಟ್ ಕಾಲೇಜು ಸಮುದಾಯವು ಫುಟ್ಬಾಲ್ ತಂಡಗಳ ಗಮನಾರ್ಹ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತಾ ಕ್ರೀಡಾಪಟುಗಳಿಗೆ ಹಾಗು ಎರಡೂ ತಂಡಕ್ಕೆ ತರಬೇತಿ ನೀಡಿದ ಕಾಲೇಜು ದೈಹಿಕ‌ ಶಿಕ್ಷಣ ನಿರ್ದೇಶಕ ಡಾ.ಪ್ರಕಾಶ್ ಡಿಸೋಜ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿವೆ.‌

Exit mobile version