Site icon Suddi Belthangady

ಉಜಿರೆ ರತ್ನಮಾನಸ ವಸತಿ ನಿಲಯದಲ್ಲಿ ನೇಜಿ ನಾಟಿ

ಉಜಿರೆ: ರತ್ನಮಾನಸ ವಸತಿನಿಲಯದಲ್ಲಿ ಆ.15ರಂದು ನೇಜಿ ನಾಟಿ ಮಾಡಲಾಗಿದೆ.ಈ ಕಾರ್ಯಕ್ರಮದ ಬಗ್ಗೆ ನಿಲಯದ ಪಾಲಕ ಯತೀಶ್ ಕೆ.ಬಳಂಜ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.

ಎಸ್‌ ಡಿ ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸೋಮಶೇಖರ್ ಶೆಟ್ಟಿಯವರು ‘ಕೃಷಿಪ್ರಧಾನ ಭಾರತದಲ್ಲಿ ಇಂದು ಕೃಷಿ ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ, ಈಗಿನ ಯುವ ಜನರು ಕೃಷಿಯನ್ನು ತಮ್ಮಲ್ಲಿ ಅಳವಡಿಸಿಕೊಂಡಲ್ಲಿ ಮುಂದೆ ಬರುವ ಆಹಾರದ ಕೊರತೆಯನ್ನು ತಡೆಯಬಹುದು’.ಈ ಕೆಲಸಗಳು ವಿದ್ಯಾರ್ಥಿಗಳಿಂದಲೆ ಪ್ರಾರಂಭ ಆಗಬೇಕು ಎಂದರು ಮತ್ತು ನೇಜಿ ತೆಗೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಿಲಯದ ಪಾಲಕರು ಮತ್ತು ತೋಟಗಾರಿಕಾ ವಿಭಾಗದ ಗಿರಿಜರವರು ವಿದ್ಯಾರ್ಥಿಗಳಿಗೆ ಸಂಧಿ ಹಾಡುಗಳನ್ನು ಹೇಳಿ ಕೊಟ್ಟರು.ಎಸ್‌ಡಿಎಂ ಡಿ.ಎಡ್ ಕಾಲೇಜಿನ ಪ್ರಾಂಶುಪಾಲ ಸ್ವಾಮಿ ಹಾಗೂ ಉಪನ್ಯಾಸಕರಾದ ಮಂಜು ಮತ್ತು ಅನುಷಾ ಹಾಗೂ ಧರ್ಮಸ್ಥಳ ಕೃಷಿ ವಿಭಾಗದ ಮೇಲ್ವಿಚಾರಕ ರವಿ, ನಿಲಯದ ಅದ್ಯಾಪಕ ರವಿಚಂದ್ರ, ಉದಯ್, ತ್ರಿಭುವನ್, ನಿಲಯದ ತೋಟಗಾರಿಕಾ ವಿಭಾಗದ ಉಮಾನಾಥ್, ರಾಜಪ್ಪ, ಮತ್ತು ನಿಲಯದ ಮತ್ತು ಡಿ.ಎಡ್ ನ ವಿಧ್ಯಾರ್ಥಿಗಳು, ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version