ಬೆಳ್ತಂಗಡಿ: 15ರಂದು ಬೆಳ್ತಂಗಡಿ ಚರ್ಚಿನ ಸ್ತ್ರೀ ಸಂಘಟನೆ ವತಿಯಿಂದ ವಿಮುಕ್ತಿ ಕೇಂದ್ರದಲ್ಲಿ ದಯಾ ಸ್ಪೆಷಲ್ ಸ್ಕೂಲಿನಾ ಮಕ್ಕಳೊಂದಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಸ್ತ್ರೀ ಸಂಘಟನೆ ಬೆಳ್ತಂಗಡಿ ಇದರ ಅಧ್ಯಕ್ಷರಾದ ಶ್ರೀಮತಿ ಸಿಲ್ವಿಯ ಪಿಂಟೋ, ಕಾರ್ಯದರ್ಶಿ ಸಿಲ್ವಿಯ ಕೋರ್ಡೆರೋ ಹಾಗೂ ಎಲ್ಲಾ ಪದಾಧಿಕಾರಿಗಳ ಮುಂದಾಳುತನದಲ್ಲಿ ಸಂಘಟನೆಯ ಸರ್ವ ಸದಸ್ಯರು ವಿಮುಕ್ತಿ ಆಶ್ರಮಕ್ಕೆ ಭೇಟಿ ನೀಡಿ ದೇಣಿಗೆಗಳನ್ನು ನೀಡಿದರು.
ವಿಮುಕ್ತಿ ಕೇಂದ್ರದ ಪ್ರಧಾನ ಗುರುಗಳಾದ ಫಾದರ್ ವಿನೋದ್ ಇವರು ಎಲ್ಲರನ್ನು ಸ್ವಾಗತಿಸಿ ವಂದಿಸಿದರು. ಬೆಳ್ತಂಗಡಿ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ಫಾದರ್ ವಾಲ್ಟರ್ ಡಿಮೇಲ್ಲೊ ಇವರು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.