Site icon Suddi Belthangady

ನಡ್ತಿಕಲ್ಲು: ಆಧಾರ್ ನೋಂದಣಿ-ತಿದ್ದುಪಡಿ ಶಿಬಿರದ ಉದ್ಘಾಟನೆ

ವೇಣೂರು: ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ನೇತೃತ್ವದಲ್ಲಿ ಮೂಡುಕೋಡಿಯ ನಡ್ತಿಕಲ್ಲು ಶ್ರೀರಾಮ ಭಜನಾ ಮಂಡಳಿಯ ಸಹಭಾಗಿತ್ವದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಮೇಳ ಆ.14 ರಂದು ಮೂಡುಕೋಡಿಯ ನಡ್ತಿಕಲ್ಲು ನಡ್ತಿಕಲ್ಲು ಶ್ರೀರಾಮ ಭಜನಾ ಮಂದಿರದಲ್ಲಿ ಉದ್ಘಾಟನೆಗೊಂಡಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಯ ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಕಾರ್ಯಕ್ರಮ ಉದ್ಘಾಟಿಸಿ, ಸರಕಾರ ತರುವ ಹಲವಾರು ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವುದು ಸವಾಲಿನ ಕೆಲಸವಾಗಿದೆ. ಇಂತಹ ಶಿಬಿರಗಳ ಮೂಲಕ ಗ್ರಾಮೀಣ ಭಾಗದ ಜನರು ತಮ್ಮ ದಾಖಲೆಗಳನ್ನು ನವೀಕರಣ ಮಾಡಲು ಸುಲಭಸಾಧ್ಯವಾಗಲಿದ್ದು, ಸರಕಾರಿ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.ವೇಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು.

ವೇಣೂರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮೆನೇಜರ್ ವಿಶ್ವೇಶ್ವರ್, ನಡ್ತಿಕಲ್ಲು ಶ್ರೀರಾಮ ಭಜನ ಮಂಡಳಿ ಅಧ್ಯಕ್ಷ ಪ್ರವೀಣ್ ಆಚಾರ್ಯ, ಅಂಚೆ ಇಲಾಖೆಯ ಹರೀಶ್ ಕಾಶಿಪಟ್ಣ, ವೇಣೂರು ಗ್ರಾ.ಪಂ. ಸದಸ್ಯರಾದ ಉಮೇಶ್ ಎನ್., ವೀಣಾ ದೇವಾಡಿಗ, ಮೂಡುಕೋಡಿ ಹಾಲು ಉ.ಸ. ಸಂಘದ ಅಧ್ಯಕ್ಷ ಪ್ರಕಾಶ್ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ವೇಣೂರು ಗ್ರಾ.ಪಂ. ಸದಸ್ಯ ಹರೀಶ್ ಪಿ.ಎಸ್. ಸ್ವಾಗತಿಸಿ, ವಂದಿಸಿದರು.ಆಧಾರ್‌ನಲ್ಲಿ ಹೆಸರು, ಜನ್ಮ ದಿನಾಂಕ, ವಿಳಾಸ ಬದಲಾವಣೆ ಹಾಗೂ 18 ವರ್ಷ ಕೆಳಗಿನವರಿಗೆ ಹೊಸ ಆಧಾರ್ ಕಾರ್ಡ್‌ಗೆ ನೋಂದಣಿ ಮಾಡಲಾಯಿತು.

ಜೊತೆಗೆ ಕಾರ್ಯಕ್ರಮದಲ್ಲಿ ಅಭಾ ಕಾರ್ಡ್ ಮತ್ತು ಈ ಶ್ರಮ್ ಕಾರ್ಡ್ ನೋಂದಣಿ ಮಾಡಲಾಯಿತು.ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವೇಣೂರು ಶಾಖೆಯ ಸಹಕಾರದಲ್ಲಿ ೦ ಮೊತ್ತದ ಬ್ಯಾಂಕು ಖಾತೆ ತೆರೆಯುವ ಸೌಲಭ್ಯವನ್ನು ಗ್ರಾ,ಮಸ್ಥರು ಪಡೆದುಕೊಂಡರು.

Exit mobile version