Site icon Suddi Belthangady

ಉಜಿರೆ: ಶ್ರೀ.ಧ.ಮಂ.ಅ.ಸೆಕೆಂಡರಿ ಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

ಉಜಿರೆ: ಶ್ರೀ.ಧ.ಮಂ ಅ.ಸೆಕೆಂಡರಿ ಶಾಲೆ ಉಜಿರೆಯಲ್ಲಿ “ಆಟಿಡೊಂಜಿ ದಿನ ” ಕಾರ್ಯಕ್ರಮವನ್ನು ಆ.12ರಂದು ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ. ಸೋಮಶೇಖರ್ .ಶೆಟ್ಟಿ ಯವರು ಸಿಂಗಾರ ಅರಳಿಸಿ ದೀಪ ಬೆಳಗಿಸಿ ಚೆನ್ನೆಮಣೆ ಆಟವಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, “ಆಷಾಡ ತಿಂಗಳಿನಲ್ಲಿ ನಮ್ಮ ಪೂರ್ವಿಕರು ಕಳೆದ ಕಷ್ಟದ ದಿನಗಳು, ಆಷಾಡ ಮಾಸದ ಆಹಾರ ಖಾದ್ಯಗಳಲ್ಲಿರುವ ಔಷಧಿಯ ಗುಣಗಳ ಬಗ್ಗೆ ಹಾಗೂ ತುಳುನಾಡಿನ ಸಂಸ್ಕೃತಿಯ ಆಚರಣೆಗಳ ಮಹತ್ವವನ್ನು ತಿಳಿಸುವುದರ ಮೂಲಕ, ಮುಂದಿನ ದಿನಗಳಲ್ಲಿ ಈ ಆಚರಣೆಗಳು ಮರೆಯಾಗದಂತೆ ನೋಡಿಕೊಳ್ಳುವ ಮಹತ್ತರವಾದ ಜವಾಬ್ದಾರಿ ಈಗಿನ ಮಕ್ಕಳಾದ್ದಾಗಬೇಕು” ಎಂದರು. ಶ್ರೀ.ಧ.ಮಂ ಶಿಕ್ಷಣ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಎಂ.ವೈ ಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಶಾಲಾ ಬಿಸಿಯೂಟದ ಸಿಂಬಂಧಿಗಳಿಗೆ ಶಾಲಾ ವತಿಯಿಂದ ಕೊಡಲ್ಪಡುವ ಉಡುಗೊರೆಯನ್ನು ನೀಡಿ ಗೌರವಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಜಾನಕಿ ಕಲ್ಮಂಜ ಇವರು “ತುಳು ಸಂದಿ ಹೇಳಿ ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ ಆಷಾಡ ಮಾಸದ ಆಚರಣೆಯ ವಿಶೇಷತೆಯ ಬಗ್ಗೆ ತಿಳಿಸಿದರು. ರತ್ನಮಾನಸದ ನಿಲಯ ಪಾಲಕ ಯತೀಶ್ ಬಳಂಜ ರವರು “ಆಷಾಡ ಮಾಸ ತುಳುನಾಡಿನ ಸಂಸ್ಕೃತಿಯ ಪ್ರತೀಕ ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಸುರೇಶ್.ಕೆ ರವರು ಆಷಾಡ ಮಾಸದ ಮಹತ್ವವನ್ನು ತಿಳಿಸಿದರು.

ಶಾಲಾ ವಿದ್ಯಾರ್ಥಿಗಳಿಂದ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ನ್ರತ್ಯ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿಗಳು ಆಷಾಡ ಮಾಸ ವಿವಿಧ ರೀತಿಯ ಖಾದ್ಯಗಳು ಹಾಗೂ ಹಳೆಕಾಲದ ವಸ್ತುಗಳ ಪ್ರದರ್ಶನ ಮಾಡಿ , ಬಹುಮಾನ ಪಡೆದರು.ಹತ್ತನೆ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು.ಶಿಕ್ಷಕ ಮೋನಪ್ಪ ಸ್ವಾಗತಿಸಿ ಶಿಕ್ಷಕ ರಂಜಿತ್ ಧನ್ಯವಾದ ಸಮರ್ಪಿಸಿದರು.ಶಿಕ್ಷಕಿ ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು.

Exit mobile version