ಉಜಿರೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡತೋಡಿ ಯಲ್ಲಿ ಆ.12ರಂದು “ಆಟಿ ದಿನ” ಕಾರ್ಯಕ್ರಮವನ್ನು ನಡೆಸಲಾಯಿತು.ಸಂಪನ್ಮೂಲ ವ್ಯಕ್ತಿಯಾಗಿ ಜಿ. ಪ. ಮಾಜಿ ಸದಸ್ಯೆ ಚಂದ್ರಕಲಾ ‘ಆಟಿ’ ತಿಂಗಳ ಆಹಾರ ಕ್ರಮದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ರೇವತಿ, ಸ್ಥಳೀಯ ಆಶಾ ಕಾರ್ಯಕರ್ತೆ ಶಾರದ ಮಕ್ಕಳ ಪೋಷಕರು ಹಾಗು ಶಾಲಾ ಶಿಕ್ಷಕ ವೃಂದದವರು, ಅಡುಗೆ ಸಿಬ್ಬಂದಿಗಳು ಹಾಜರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಸೇವಂತಿ ಸ್ವಾಗತಿಸಿ, ಶಿಕ್ಷಕಿ ಉಷಾಲತಾ ವಂದಿಸಿದರು.