Site icon Suddi Belthangady

ಉಪ್ಪಿನಂಗಡಿ: ಅಡಿಕೆ ಮಾರಿ ಬರುತ್ತಿದ್ದ ವ್ಯಕ್ತಿಗೆ ಪಂಗನಾಮ

ಉಪ್ಪಿನಂಗಡಿ: ಮಗಳ ಸ್ನೇಹಿತ ಎಂದು ಹೇಳಿ ಅಡಿಕೆ ಮಾರಿ ಬರುತ್ತಿದ್ದ ವ್ಯಕ್ತಿಯೊಬ್ಬರನ್ನು ನಂಬಿಸಿ ಅವರಿಂದ 7ಸಾವಿರ ರೂಪಾಯಿ ಪಡೆದು ಯುವಕ ಯಾಮಾರಿಸಿ ಎಸ್ಕೆಪ ಆದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ಪದ್ಮುಂಜದ ಸಮೀಪದ ಉಳಿಯ ನಿವಾಸಿ ದೇವಪ್ಪ ಗೌಡ(65) ಅಡಿಕೆ ಮಾರಿ ಬರುತ್ತಿದ್ದಾಗ ಸಿಕ್ಕಿದ ಯುವಕನೊಬ್ಬ ನಾನು ನಿಮ್ಮ ಮಗಳ ಸಹಪಾಠಿ ಮೋಹನ್, ಕೆನರಾ ಬ್ಯಾಂಕ್ ಉದ್ಯೋಗಿ ಎಂದು ಹೇಳಿ ಪರಿಚಯಿಸಿಕೊಂಡಿದ್ದಾನೆ.ಬಳಿಕ ಮೋದಿಯವರು ಕೊರೊನಾ ಸಮಯದಲ್ಲಿ ಕಳಿಸಿಕೊಟ್ಟ ಹಣ ಬ್ಯಾಂಕಿನಲ್ಲಿ ಕೊಳೆಯುತ್ತಿದೆ.ಅದನ್ನು ನಿಮ್ಮ ಖಾತೆಗೆ ವರ್ಗಾಯಿಸಿ ಕೊಡುತ್ತೇನೆ ಅದಕ್ಕೆ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಜೆರಾಕ್ಸ್ ತನ್ನಿ ಎಂದು ಹೇಳಿ ಅವರಿಂದ ಮುಂಗಡ 7ಸಾವಿರ ರೂ. ಪಡೆದಿದ್ದ.

ದೇವಪ್ಪ ಗೌಡ ಅವರು ಜೆರಾಕ್ಸ್ ಪ್ರತಿಯೊಂದಿಗೆ ಹಿಂದಿರುಗಿದಾಗ ಬೈಕಿನೊಂದಿಗೆ ಯುವಕ ನಾಪತ್ತೆಯಾಗಿದ್ದ.ಆತನಿಗಾಗಿ ಕಾದು ಕಾದು ಬಸವಳಿದಾಗ ತಾನು ಮೋಸ ಹೋಗಿರುವ ಬಗ್ಗೆ ಗೊತ್ತಾಗಿದೆ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ಪೇಟೆಯೊಳಗಿನ ಸಿಸಿ ಕೆಮರಾದಲ್ಲಿನ ದೃಶ್ಯಾವಳಿಯ ಆಧಾರದ ಮೇಲೆ ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ.

Exit mobile version