Site icon Suddi Belthangady

ನಾಳ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಶ್ರಮದಾನ

ಆ.10ರಂದು ನಾಳ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಶ್ರಮದಾನ ನಡೆಯಿತು.

ಶಾಲಾ ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಶ್ರಮದಾನದಲ್ಲಿ ಭಾಗವಹಿಸಿ ಶಾಲೆಯ ಸುತ್ತಮುತ್ತ, ಆಟದ ಮೈದಾನ, ಅಡಿಕೆ ತೋಟದ ಸ್ವಚ್ಛತೆಯನ್ನು ಮಾಡಿದರು.

ಇದೇ ಸಂದರ್ಭದಲ್ಲಿ ತೆಂಗಿನಗಿಡ ಮತ್ತು ಅಡಿಕೆ ಗಿಡಗಳಿಗೆ ಸೊಪ್ಪು ಮತ್ತು ಗೊಬ್ಬರ ಹಾಕಲಾಯಿತು.

ಶಾಲಾ ಎಸ್.ಡಿ.ಯಂ.ಸಿಯ ಅಧ್ಯಕ್ಷರಾದ ಮೋಹನ್ ಗೌಡ ತಾರೆಮಾರು ಮತ್ತು ಉಪಾಧ್ಯಕ್ಷರಾದ ರೀತಾ ನಾಳ ಹಾಗೂ ಎಸ್.ಡಿ.ಯಂ.ಸಿ ಸದಸ್ಯರು ಹೆಚ್ಚಿನ ಮುತುವರ್ಜಿ ವಹಿಸಿದ್ದರು.ಶಾಲಾ ಮುಖ್ಯೋಪಾಧ್ಯಾಯರಾದ ಪಿಲಿಪ್ ರೊನಾಲ್ಡ್ಡಿಮೆಲ್ಲೊ ಹಾಗೂ ಸಹಶಿಕ್ಷಕರು ಶ್ರಮದಾನ ಯಶಸ್ವಿಯಾಗಲು ಸಹಕರಿಸಿದರು.

Exit mobile version