Site icon Suddi Belthangady

ಮಾಲಾಡಿ ಗ್ರಾ.ಪಂ ನೂತನ ಅಧ್ಯಕ್ಷ ಪುನೀತ್ ಕುಮಾರ್ ಮತ್ತು ಸದಸ್ಯ ವಸಂತ ಪೂಜಾರಿ ಕಾಂಗ್ರೆಸ್ ಸೇರ್ಪಡೆ

ಮಾಲಾಡಿ: ಮಾಲಾಡಿ ಗ್ರಾ.ಪಂ ನೂತನ ಅಧ್ಯಕ್ಷ ಪುನೀತ್ ಕುಮಾರ್ ಮತ್ತು ಸದಸ್ಯ ವಸಂತ ಪೂಜಾರಿ ಆ.9ರಂದು ಕಾಂಗ್ರೇಸ್ ಸೇರ್ಪಡೆಗೊಂಡರು.

ಇವರನ್ನು ಮಾಜಿ ಶಾಸಕ ಕೆ. ವಸಂತ ಬಂಗೇರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಸತೀಶ್ ಬಂಗೇರ ಕಾಶಿಪಟ್ಟ, ನಾಗೇಶ್ ಕುಮಾರ್ ಗೌಡ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಪ್ರಮುಖರಾದ ಮನೋಹ‌ರ ಕುಮಾರ್, ಶೇಖರ್ ಕುಕ್ಕೇಡಿ, ಜಯವಿಕ್ರಮ್ ಕಲ್ಲಾಪು, ಪ್ರವೀಣ್ ಫೆರ್ನಾಂಡೀಸ್ ಉಜಿರೆ, ವಿನ್ಸೆಂಟ್ ಡಿಸೋಜ, ಪದ್ಮನಾಭ ಸಾಲಿಯಾನ್, ಜಗದೀಶ್ ಡಿ, ಗ್ರೆಗೋರಿ ಮಿರಾಂದ, ಬೆನೆಡಿಕ್ಟ್ ಡಿಸೋಜ, ಬೇಬಿ ಸುವರ್ಣ, ಉಮೇಶ್ ಮಾಲಾಡಿ, ಐರಿನ್ ಮೋರಾಸ್, ಮಹಮ್ಮದ್ ಆಲಿ, ಅಲ್ತಾಫ್ ಮಾಲಾಡಿ, ಪ್ರೇಮ ವಸಂತ್, ಸುನೀಲ್ ಜೈನ್, ಪ್ರವೀಣ್ ಪಿಂಟೋ ಕಾಶಿಪಟ್ಟ, ರಾಜೇಶ್ ಶೆಟ್ಟಿ ಪೆರಾಡಿ, ಅಶ್ವಥ್ ಗೌಡ ಮೊಗ್ರು, ಹರೀಶ್ ಪೂಜಾರಿ, ರಮೇಶ್ ಪೂಜಾರಿ ಪಡ್ಡಾಯಿಮಜಲು, ಸತೀಶ್ ಪೂಜಾರಿ ಪಿ.ಎನ್, ರಾಕೇಶ್ ಕುಮಾರ್ ಮೂಡುಕೋಡಿ ಮತ್ತಿತರರು ಉಪಸ್ಥಿತರಿದ್ದರು.

ಪುನೀತ್ ಅವರು ಮಾಲಾಡಿ ಗ್ರಾ.ಪಂ ಗೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿ, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.ಎರಡೂವರೆ ವರ್ಷ ಗುರುತಿಸಿಕೊಂಡಿದ್ದರು.ಎರಡೂವರೆ ವರ್ಷ ಅವಧಿಗೆ ಆ. 9ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದು ಮಾಲಾಡಿ ಗ್ರಾ.ಪಂ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ಕಾಂಗ್ರೇಸ್ ಸೇರ್ಪಡೆಯಾದರು.

Exit mobile version