Site icon Suddi Belthangady

ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಉಷಾ ಅರವಿಂದ ಕಾರಂತ್ ಉಪಾಧ್ಯಕ್ಷರಾಗಿ ರವಿ ಕುಮಾರ್ ಬರೆಮೇಲು ಆಯ್ಕೆ

ಉಜಿರೆ: ಉಜಿರೆ ಗ್ರಾಮ ಪಂಚಾಯತ್ ನ ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಉಷಾ ಅರವಿಂದ ಕಾರಂತ್ ಹಾಗೂ ಉಪಾಧ್ಯಕ್ಷರಾಗಿ ರವಿ ಕುಮಾರ್ ಬರಮೇಲು ಆಯ್ಕೆಯಾದರು.

ಇಲ್ಲಿ 34 ಸದಸ್ಯರ ಬಲ ಇದ್ದು 25 ಮಂದಿ ಬಿಜೆಪಿ ಸದಸ್ಯರನ್ನು ಹೊಂದಿದ್ದು ಒಬ್ಬರು ವಿದೇಶಕ್ಕೆ ಹೋಗಿರುವುದರಿಂದ ಪಸ್ತುತ ಬಿಜೆಪಿ ಬೆಂಬಲಿತ 24 ಮಂದಿ ಮತ್ತು 9 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೊಂದಿದ್ದು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾಗಿದ್ದು ಬಿಜೆಪಿಯಿಂದ ಉಷಾ ಅರವಿಂದ ಕಾರಂತ್ ಮತ್ತು ಕಾಂಗ್ರೆಸ್ ನಿಂದ ನಾಗವೇಣಿ ನಾಮಪತ್ರ ಸಲ್ಲಿಸಿದ್ದರು.ಮತದಾನ ನಡೆದಾಗ ಉಷಾ ಅರವಿಂದ ಕಾರಂತ್ 23 ಮತ ಪಡೆದು ಆಯ್ಕೆಯಾದರು.ಕಾಂಗ್ರೆಸ್ ಬೆಂಬಲಿತ ನಾಗವೇಣಿ 10 ಮತ ಪಡೆದು ಕೊಂಡರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾತಿ ಯಾಗಿದ್ದು ಬಿಜೆಪಿ ಯಿಂದ ಹಾಲಿ ಉಪಾಧ್ಯಕ್ಷ ರವಿ ಕುಮಾರ್ ಮತ್ತು ಕಾಂಗ್ರೆಸ್ ನಿಂದ ಜೆನೆಟ್ ಪಿಂಟೋ ನಾಮಪತ್ರ ಸಲ್ಲಿಸಿದ್ದರು.ರವಿ ಕುಮಾರ್ 25 ಮತ ಪಡೆದು ಆಯ್ಕೆಯಾದರು.ಕಾಂಗ್ರೆಸ್ ಬೆಂಬಲಿತ ಜೆನೆಟ್ ಪಿಂಟೋ 8 ಮತ ಪಡೆದು ಕೊಂಡರು.

ಚುನಾವಣಾಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಅಧಿಕಾರಿ ಲಿಖಿತ್ ರಾಜ್ ಪ್ರಕ್ರಿಯೆ ನಡೆಸಿದರು, ಪಿಡಿಒ ಪ್ರಕಾಶ್ ಶೆಟ್ಟಿ ಪಿ.ಹೆಚ್., ಕಾರ್ಯದರ್ಶಿ ಶ್ರವಣ್ ಕುಮಾರ್ ಸಿಬ್ಬಂದಿಗಳು ಸಹಕರಿಸಿದರು.

Exit mobile version