Site icon Suddi Belthangady

ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸುಧಿನ್.ಡಿ, ಉಪಾಧ್ಯಕ್ಷರಾಗಿ ಯಶೋಧರ ಕೆ.ವಿ ಅವಿರೋಧವಾಗಿ ಆಯ್ಕೆ

ಶಿಶಿಲ: ಪಂಚಾಯತ್ ಅಧ್ಯಕ್ಷ ಸ್ಥಾನ ವಾರ್ಡ್ ನಂಬರ್168 ರ ಸದಸ್ಯ ಸುಧಿನ್ .ಡಿ ಉಪಾಧ್ಯಕ್ಷರಾಗಿ ವಾರ್ಡ್ ನಂಬರ್ 169 ರ ಸದಸ್ಯ ಯಶೋಧರ ಕೆ.ವಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಚುನಾವಣಾ ಪ್ರಕ್ರಿಯೆಗೆ ಚುನಾವಣಾಧಿಕಾರಿ ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಹಾಗೂ ಇವರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಬನಪ ಗೌಡ್ರು ಸಹಕರಿಸಿದರು.ತದನಂತರ ನಡೆದ ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕರು ಮಹಾಶಕ್ತಿ ಕೇಂದ್ರದ ಕರುಣಾಕರ ಶಿಶಿಲ, ಕೊರಗಪ್ಪ ಗೌಡ ಹಾಗೂ ನಿಕಟ ಪೂರ್ವ ಅಧ್ಯಕ್ಷ ಸಂದೀಪ್.ಎ.ಎಸ್ ನಿಕಟ ಪೂರ್ವ ಉಪಾಧ್ಯಕ್ಷೆ ವಿಮಲ.ಡಿ ಹಾಗೂ ಸದಸ್ಯರಾದ ಲಲಿತ ಮತ್ತು ಚೆನ್ನಕ್ಕ ನೂತನ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.

ಪಂಚಾಯತ್ ವತಿಯಿಂದ ನಿಕಟಪೂರ್ವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಬಣಪ ಗೌಡ್ರು ಸನ್ಮಾನಿಸಿದರು.

Exit mobile version