ಮಾಲಾಡಿ: ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ. ಮೀಸಲಾತಿ ನಿಗದಿಯಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಪುನೀತ್ ಕುಮಾರ್, ದಿನೇಶ್ ಕರ್ಕೇರ, ತುಳಸಿಯವರು, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿದ್ದು ಸೆಲೆಸ್ಟಿನ್ ಡಿಸೋಜಾ ಮತ್ತು ಜಯಂತಿ ಯವರು ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ತುಳಸಿಯವರು ನಾಮಪತ್ರ ವಾಪಸು ಪಡೆದಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಮತ್ತು ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು ಚುನಾವಣಾ ಮೂಲಕ ಅಧ್ಯಕ್ಷ ಸ್ಥಾನಕ್ಕೆ 10 ಮತ ಪಡೆದು ಪುನೀತ್ ಕುಮಾರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 11 ಮತ ಪಡೆದು ಸೆಲೆಸ್ಟಿನ್ ಡಿಸೋಜಾ ವಿಜಯಶಾಲಿಯಾಗಿದ್ದಾರೆ.ಒಟ್ಟು 18ಜನ ಸದಸ್ಯ ಬಲ ಹೊಂದಿರುವ ಈ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ 11 ಜನ , ಕಾಂಗ್ರೆಸ್ ಬೆಂಬಲಿತರಲ್ಲಿ 7ಜನ ಸದಸ್ಯರಿದ್ದು10 ಜನರ ಬೆಂಬಲದೊಂದಿಗೆ ಪುನೀತ್ ಕುಮಾರ್ ಜಯಶಾಲಿಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಎಸ್. ಚಂದ್ರಶೇಖರ್ ಭಾಗವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ ಸಹಕರಿಸಿದರು.