ಬೆಳ್ತಂಗಡಿ: ಎಸ್.ಕೆ.ಎಸ್.ಎಸ್.ಎಫ್ ವಿಖಾಯ ತಂಡ ಬೆಳ್ತಂಗಡಿ ವಲಯ ಹಾಗು ಸವಣಾಲು ಗ್ರಾಮದ ಎಸ್ಕೆಎಸ್ಸೆಸ್ಸೆಫ್ ಯುನಿಟ್ ವತಿಯಿಂದ ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ನಡೆಯಿತು.
ಶಾಲೆಯ ಪರಿಸರದಲ್ಲಿ ಅನವಶ್ಯಕವಾಗಿ ಬೆಳೆದಿರುವ ಗಿಡ ಗಂಟಿಗಳನ್ನು ಹಾಗೂ ಅಪಾಯದಲ್ಲಿರುವ ಮರಗಳ ರೆಂಬೆಗಳನ್ನು ತೆರವುಗೊಳಿಸಿ ಶಾಲಾ ಮಕ್ಕಳ ಸುರಕ್ಷಿತೆಗೆ ಅನುವು ಮಾಡಿಕೊಡಲಾಯಿತು. ಶಾಲಾ ಕೈ ತೋಟಕ್ಕೆ ಬೇಲಿ ನಿರ್ಮಾಣ ಮಾಡುವುದರ ಜೊತೆಗೆ ನೀರು ಸರಾಗವಾಗಿ ಹರಿದು ಹೋಗಲು ಶಾಲಾ ಸುತ್ತಲೂ ಆವಶ್ಯಕತೆ ಇರುವಲ್ಲಿ ಚರಂಡಿಗಳನ್ನು ಸುಸ್ತಿತಿಗೆ ತರಲಾಯಿತು.
ಸಾಮರಸ್ಯಕ್ಕೆ ನಾಂದಿ: ಇದೇ ವೇಳೆ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯ ವತಿಯಿಂದ ಗ್ರಾಮದ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪರಿಸರವನ್ನು ಸ್ವಚ್ಛಗೊಳಿಸುವುದರ ಮೂಲಕ ಸಮಾಜದ ಸಾಮರಸ್ಯಕ್ಕೆ ನಾಂದಿ ಹಾಡಲಾಯಿತು.