Site icon Suddi Belthangady

ಬೆಳಾಲು ಗ್ರಾ.ಪಂ.ಅದೃಷ್ಟ ಚೀಟಿಯಲ್ಲಿ ಬಿಜೆಪಿಯ ವಿದ್ಯಾ ಶ್ರೀನಿವಾಸ್ ಗೆ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷರಾಗಿ ಗೀತಾ ಅವಿರೋಧ ಆಯ್ಕೆ

ಬೆಳಾಲು: ಬೆಳಾಲು ಗ್ರಾಮ ಪಂಚಾಯತ್ ನ ಅಧ್ಯಕ್ಷ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ಎರಡೂವರೆ ವರ್ಷದ ಅವಧಿಗೆ ಬಿಜೆಪಿ ಬೆಂಬಲಿತ ವಿದ್ಯಾ ಶ್ರೀನಿವಾಸ್ ಗೌಡ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗೀತಾ ಆಯ್ಕೆಯಾದರು.

ಇಲ್ಲಿ 12 ಸದಸ್ಯರ ಬಲ ಇದ್ದು 6 ಮಂದಿ ಬಿಜೆಪಿ ಮತ್ತು 6 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದು ಬಿಜೆಪಿಯಿಂದ ಸುರೇಂದ್ರ ಗೌಡ, ವಿದ್ಯಾ ಶ್ರೀನಿವಾಸ್ ಗೌಡ ಮತ್ತು ಕಾಂಗ್ರೆಸ್ ನಿಂದ ದಿನೇಶ್ ಕೋಟ್ಯಾನ್ ನಾಮಪತ್ರ ಸಲ್ಲಿಸಿದ್ದು ಬಿಜೆಪಿಯ ಸುರೇಂದ್ರ ಗೌಡ ನಾಮಪತ್ರ ವಾಪಸು ಪಡೆದವರು.ಬಳಿಕ ದಿನೇಶ್ ಕೋಟ್ಯಾನ್ ಮತ್ತು ವಿದ್ಯಾ ಶ್ರೀನಿವಾಸ ಗೌಡರ ನಡುವೆ ಮತದಾನ ನಡೆದು ಸಮಬಲ ತಲಾ 6 ಮತಗಳನ್ನು ಪಡೆದರು.ಬಳಿಕ ಚೀಟಿ ಎತ್ತುವ ಮೂಲಕ ಬಿಜೆಪಿ ಬೆಂಬಲಿತ ವಿದ್ಯಾ ಶ್ರೀನಿವಾಸ್ ಗೌಡ ಆಯ್ಕೆಯಾದರು.ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾತಿ ಯಾಗಿದ್ದು ಕಾಂಗ್ರೆಸ್ ಬೆಂಬಲಿತ ಹಾಲಿ ಅಧ್ಯಕ್ಷೆ ಜಯಂತಿ ಮತ್ತು ಗೀತಾ ರವರಿಗೆ ಅವಕಾಶ ಇದ್ದು ಗೀತಾ ರವರು ಮಾತ್ರ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ವಿದ್ಯಾ ಡಿ.ಪಿ. ಪ್ರಕ್ರಿಯೆ ನಡೆಸಿದರು.ಪಿಡಿಒ ಲಕ್ಷ್ಮೀ ಬಾಯಿ ಹೆಚ್., ಕಾರ್ಯದರ್ಶಿ ಮೋಹನ ಬಂಗೇರ, ಸಿಬ್ಬಂದಿಗಳು ಸಹಕರಿಸಿದರು.

Exit mobile version