Site icon Suddi Belthangady

ಸೌಜನ್ಯಳಿಗೆ ನ್ಯಾಯ ಸಿಗಲೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಶಾಸಕ ಹರೀಶ್ ಪೂಂಜರಿಂದ ಕುತ್ಯಾರು ದೇವಾಲಯದಲ್ಲಿ ಪ್ರಾರ್ಥನೆ

ಬೆಳ್ತಂಗಡಿ: ಸೌಜನ್ಯಳಿಗೆ ನ್ಯಾಯ ಸಿಗಲೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಶಾಸಕ ಹರೀಶ್ ಪೂಂಜರಿಂದ ಕುತ್ಯಾರು ಸೋಮನಾಥೇಶ್ವರ ದೇವರಿಗೆ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಮತ್ತು ಸೌಜನ್ಯಾಳಿಗೆ ನ್ಯಾಯ ಸಿಗಬೇಕು ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಉಪಾಧ್ಯಕ್ಷ ಸತೀಶ್, ಸಂಚಾಲಕ ಸಂತೋಷ್ ಅತ್ತಾಜೆ, ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಗೋ ರಕ್ಷಣ ಪ್ರಮುಖ್ ರಮೇಶ್, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಸುಧೀರ್ ಚಾರ್ಮಾಡಿ, ಗುರು ಲಾಯಿಲ ಮತ್ತಿತರು ಉಪಸ್ಥಿತರಿದ್ದರು.

Exit mobile version