ಸಾವ್ಯ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಸಾವ್ಯ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಎಸ್.ಡಿ.ಎಂ.ಸಿ ಮತ್ತು ಪೋಷಕ ವೃಂದದವರಿಂದ ಶ್ರಮದಾನ ಹಮ್ಮಿಕೊಳ್ಳಲಾಯಿತು.ಶಾಲಾ ಸುತ್ತಮುತ್ತ ಇರುವ ಸೊಪ್ಪು ಮತ್ತು ಹುಲ್ಲನ್ನು ತೆಗೆಯಲಾಯಿತು.ಸೊಪ್ಪನ್ನು ತೆಂಗಿನ ಬುಡಕ್ಕೆ ಹಾಕಲಾಯಿತು.ಶಾಲೆಯ ಎದುರುಗಡೆ ಹೂತೋಟ ನಿರ್ಮಾಣ ಮಾಡಲಾಯಿತು.
ಸುಮಾರು 60ಕ್ಕೂ ಹೆಚ್ಚು ಜನರು ಶ್ರಮದಾನದಲ್ಲಿ ಭಾಗವಹಿಸಿದ್ದರು. ನವೀನ್ ಶೆಟ್ಟಿ ವಕೀಲರು, ಸಾವ್ಯ, ಧ್ವನಿವರ್ಧಕ ಕೊಡುಗೆದಾರರು ಉಪಸ್ಥಿತರಿದ್ದರು.
ಎಸ್.ಡಿ .ಎಮ್. ಸಿ ಅಧ್ಯಕ್ಷ ದಯಾನಂದ ಪೂಜಾರಿ, ಗ್ರಾ.ಪಂ.ಸದಸ್ಯ ಹರೀಶ ಹೆಗ್ಡೆ , ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ರವರ ನೇತೃತ್ವದಲ್ಲಿ ಶ್ರಮದಾನ ನಡೆಯಿತು.