Site icon Suddi Belthangady

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಜಿರೆ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಉಜಿರೆ: ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾ ಮಂಟಪದಲ್ಲಿ ಆ.3ರಂದು ತಾ.19.9.2023ರಿಂದ 21.9.2023 ರವರೆಗೆ ಶಾರದ ಮಂಟಪದಲ್ಲಿ ನಡೆಯುವ 17ನೇ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಗೌರವಾಧ್ಯಕ್ಷರಾದ ಶರತ್ ಕೃಷ್ಣ ಪಡ್ವೇಟ್ನಾಯರು ಹಾಗೂ ಪಂಚಾಯತ್ ಅಧ್ಯಕ್ಷರಾದ ಪುಷ್ಪಾವತಿ ಆರ್ ಶೆಟ್ಟಿ ಅವರು ಬಿಡುಗಡೆಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಗಣೇಶೋತ್ಸವದ ಸಂಚಾಲಕರಾದ ಮೋಹನ್ ಕುಮಾರ್, ಮಾಜಿ ಅಧ್ಯಕ್ಷ ಅರವಿಂದ ಕಾರಂತ್ ಸಂಚಾಲಕ ಪ್ರಕಾಶ್ ಅಪಪ್ರಮೆಯ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣಗೌಡ, ಕಾರ್ಯದರ್ಶಿ ಪ್ರವೀಣ್, ಕೋಶಾಧಿಕಾರಿ ಧೀರಾಜ್ ಉಪಸ್ಥಿತರಿದ್ದರು.

ಕುಮಾರಿ ಇಂಚರಾ ಕಾರಂತರಿಂದ ಪ್ರಾರ್ಥನೆ ಮಾಡಿದರು.ಬಿಎಸ್ ಪ್ರಸಾದರಿಂದ ಪ್ರಾಸ್ತಾವಿಕ ನುಡಿ ಹಾಗೂ ಗೋಪಾಲಕೃಷ್ಣ ಜಿಕೆ ಅವರಿಂದ ವಿವರಣೆ ನೀಡಿದರು.ಮಮತಾ ಧನ್ಯವಾದ ಅರ್ಪಿಸಿದರು.

Exit mobile version