ಬೆಳ್ತಂಗಡಿ: ಬೆಳ್ತಂಗಡಿ ಧರ್ಮ್ ಪ್ರಾಂತ್ಯ ಸ್ಥಾಪನೆಯಾಗಿ ಹಾಗು ಧರ್ಮಾದ್ಯಕ್ಷರಾದ ಮಾರ್ ಲಾರೆನ್ಸ್ ಮುಕ್ಕುಯಿಯವರ ಧರ್ಮಾದ್ಯಕ್ಷ ದೀಕ್ಷೆಯ 25ನೇ ವರ್ಷಕ್ಕೆ ಧರ್ಮ ಪ್ರಾಂತ್ಯವು ಕಾಲಿಟ್ಟಿದೆ.ಕಳೆದ 5ವರ್ಷಗಳಿಂದ ಹಲವು ಕಾರ್ಯಕ್ರಮಗಳೊಂದಿಗೆ ಧರ್ಮಪ್ರಾಂತ್ಯವು ಇದೇ ಆಗಸ್ಟ್ 4ಕ್ಕೆ ಶುರುವಾಗಿರುವ ಬೆಳ್ಳಿ ಹಬ್ಬದ ಆಚರಣೆಗೆ ಸಿದ್ದತೆಗೆ ಚಾಲನೆ ನಡೆಯಿತು.ಬಡವರಿಗೆ 25 ಜೂಬಿಲಿ ಸವಿನೆನಪಿಗೆ ಹೊಸ ಮನೆ ಕಟ್ಟುವ ಯೋಜನೆ ಹಿಡಿದು ಅನೇಕ ಜನಸೇವಾ ಕಾರ್ಯಗಳು ಹಾಗೂ ಆದ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಧರ್ಮಪ್ರಾಂತ್ಯವು ಜೂಬಿ ಆಚರಿಸಲು ಸಿದ್ಧತೆ ನಡೆಯುತ್ತಿದೆ.
ಧರ್ಮಾದ್ಯಕ್ಷರಾದ ಅತಿ ವಂದನೀಯ ಮಾರ್ ಲಾರೆನ್ಸ ಮುಕ್ಕುಯಿಯವರ ಧರ್ಮಾದ್ಯಕ್ಷ ದೀಕ್ಷೆ ಪಡೆದು 25ವರ್ಷಗಳಾಗುತ್ತಿದೆ. 25 ವರ್ಷಗಳ ಜನಸೇವೆ ಹಾಗೂ ಆದ್ಯಾತ್ಮಿಕ ನಾಯಕತ್ವವು ಧರ್ಮಪ್ರಾಂತ್ಯಕ್ಕೆ ದೇವ ಪರಿಪಾಲನೆಯ ನೇರ ಅನುಭವ.
“ವಂದನೆಯೊಂದಿಗೆ ಒಮ್ಮನದಿಂ” ದ್ಯೇಯ ವಾಕ್ಯದೊಂದಿಗೆ ಬೆಳ್ಳಿ ಹಬ್ಬದ ಆಚರಣೆಗಳು ಆಗಸ್ಟ 4ಕ್ಕೆ ಚಾಲನೆ ನೀಡಲಾಗಿದೆ.