ಬೆಳ್ತಂಗಡಿ: ಶಿಶಿಲ ಗ್ರಾಮದ ನಿವಾಸಿ ಗಿರಿಯಪ್ಪ ಗೌಡ ಹಾಗೂ ಲಲಿತ ದಂಪತಿ ನಾಗನಡ ಎಂಬಲ್ಲಿ ಮನೆಯ ಪಕ್ಕದಲ್ಲಿ ನಮ್ಮ ಸ್ವಾಧೀನದಲ್ಲಿರುವ ಜಾಗದಲ್ಲಿ ಸಾಲ ಮಾಡಿ ಕೋಳಿ ಮಾಂಸದ ಅಂಗಡಿ ನಡೆಸುತ್ತಿದ್ದು, ಇದನ್ನು ಸಹಿಸಲಾಗದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ದ್ವೇಷದಿಂದ ಅಧಿಕಾರಿಗಳಿಗೆ ದೂರು ನೀಡಿ ಕೋಳಿ ಮಾಂಸದ ಅಂಗಡಿಯನ್ನು ಮುಚ್ಚಿಸಬೇಕೆಂದು ಅಧಿಕಾರಿಗಳ ಮೂಲಕ ಒತ್ತಡ ತರುತ್ತಿದ್ದಾರೆ ಎಂದು ಗಿರಿಯಪ್ಪ ಗೌಡ ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಆ.4 ಕರೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಿರಿಯಪ್ಪ ಗೌಡರ ಪತ್ನಿ ಲಲಿತ, ಕರುಣಾಕರ ಶಿಶಿಲ, ಜಗದೀಶ್ ಶಿಶಿಲ, ಆನಂದ ಪೂಜಾರಿ ಶಿಶಿಲ ಉಪಸ್ಥಿತರಿದ್ದರು.