Site icon Suddi Belthangady

ಮುಂಡಾಜೆ ಕಾಲೇಜಿಲ್ಲಿ ಶೈನ್ ಬಿತ್ತಿ ಪತ್ರಿಕೆ ಬಿಡುಗಡೆ

ಮುಂಡಾಜೆ: ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಆ.2 ‘ಶೈನ್ ‘ಎಂಬ ಇಂಗ್ಲೀಷ್ ಭಿತ್ತಿ ಪತ್ರಿಕೆಯ ಬಿಡುಗಡೆಯು ನೆರವೇರಿತು.

ಕಾಲೇಜಿನ ಪ್ರಾಂಶುಪಾಲರಾದ ಜಾಲಿ ಒ.ಎ. ಅವರು ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಆಧುನಿಕ ಯುಗದಲ್ಲಿ ಇಂಗ್ಲೀಷ್ ಭಾಷೆಯ ಮಹತ್ವದ ಬಗ್ಗೆ ತಿಳಿಸಿ ಹೇಳಿದರು.ಇಂಗ್ಲಿಷ್ ಕ್ಲಬ್ ಇದರ ಸಂಯೋಜಕರಾದ ಪುರುಷೋತ್ತಮ ಶೆಟ್ಟಿಯವರು ಇಂಗ್ಲಿಷ್ ಲೇಖನಗಳನ್ನು ಬರೆಯುವುದರ ಬಗ್ಗೆ ಮಾಹಿತಿ ನೀಡಿದರು.ವಿದ್ಯಾರ್ಥಿ ಧನುಷ್ ಇವರು ಪತ್ರಿಕೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ವಿದ್ಯಾರ್ಥಿನಿ ಧೃತಿ ಇವರು ಸ್ವಾಗತಿಸಿ, ಅಕ್ಷಯ ಇವರು ಧನ್ಯವಾದಿಸಿದರು.ವಿದ್ಯಾರ್ಥಿನಿ ಧನ್ಯ ಇವರು ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಸಿಬ್ಬಂದಿ ವರ್ಗದವರು ಸಹಕರಿಸಿದರು.

Exit mobile version