Site icon Suddi Belthangady

ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವನಮಹೋತ್ಸವ ಮತ್ತು ವೈದ್ಯಕೀಯ ತಪಾಸಣಾ ಶಿಬಿರ

ಮಚ್ಚಿನ: ಯೇನೇಪೋಯ ಆಯುರ್ವೇದ ಮತ್ತು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇವರ ಸಹಯೋಗದಲ್ಲಿ ಔಷಧೀಯ ವನ ಎಂಬ ಪರಿಕಲ್ಪನೆಯಲ್ಲಿ ವನಮಹೋತ್ಸವ ಮತ್ತು ವೈದ್ಯಕೀಯ ತಪಾಸಣಾ ಶಿಬಿರವು ಜುಲೈ 27 ರಂದು ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಚ್ಚಿನ ಗ್ರಾಮಪಂಚಾಯತ್ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಉದ್ಘಾಟಿಸಿ ಮಾತನಾಡಿದ ವಿದ್ಯಾರ್ಥಿಗಳು ಪ್ರಸ್ತುತ ಮಕ್ಕಳಿಗೆ ಔಷಧೀಯ ಗಿಡಮರಗಳ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಮಾದರಿದಾಯಕ ಎಂದು ನುಡಿದರು.

ಮುಖ್ಯ ಅಥಿತಿಗಳಾಗಿ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಯೋಗೀಶ್ ನಾಯಕ್ ಬಿ ಮಾತನಾಡಿ ವಾಣಿಜ್ಯ ಬೆಳೆಗಳ ಹಾವಳಿಯಿಂದಾಗಿ ಸಹಜವಾಗಿ ನಮ್ಮ ಸುತ್ತಮುತ್ತಲಲ್ಲಿ ಇದ್ದ ಔಷಧೀಯ ಗಿಡಮರಗಳು ಕಣ್ಮರೆಯಾಗಿ ಇಂದು ನಾವು ಅನಿವಾರ್ಯವಾಗಿ ಇಂತಹ ಔಷಧೀಯ ವನಗಳ ಮರುಸೃಷ್ಟಿ ಮಾಡಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಡಾ. ಆಶಾ ಮಾರಡ್ಕ ಮಾತಾನಾಡಿ ಅಳಿವಿನಚಿಂನಲ್ಲಿರುವ ಔಷಧೀಯ ಸಸ್ಯಗಳ ಮಾಹಿತಿ ನೀಡಿದರು.ಹಾಗೂ ಡಾಕ್ಟರ್ ಲಕ್ಷ್ಮೀಶ್ ಉಪಾಧ್ಯಯರವರು ವಿದ್ಯಾರ್ಥಿ ಗಳನ್ನುದ್ದೇಶಿಸಿ ಮಾತನಾಡುತ್ತಾ ಹಿರಿಯರಲ್ಲಿ ಇದ್ದ ಗಿಡ ಮತ್ತು ಮನುಷ್ಯ ಸಂಬಂಧ ಪ್ರಸ್ತುತ ಕಾಲಘಟ್ಟದಲ್ಲಿ ಇಲ್ಲವಾಗಿದೆ. ಗಿಡಮರಗಳ ಪೋಷಣೆ ಮಾಡಿ ನಮ್ಮ ಮುಂದಿನ ತಲೆಮಾರುಗಳಿಗೆ ಉಳಿಸುವ ಜವಾಬ್ದಾರಿಯನ್ನು ನೆನಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲರಾದ ಖಾಲಿದ್ ಬಿ ವಹಿಸಿ ಮಾತನಾಡಿ ಪ್ರಪಂಚಕ್ಕೆ ಆಯುರ್ವೇದವನ್ನು ಪರಿಚಯಿಸಿದ ಕೀರ್ತಿ ಭಾರತ್ತಕ್ಕಿದೆ ಇದು ಹೆಮ್ಮೆಯ ವಿಷಯ ಎಂದರು. ಶಾಲೆಯ ಶುಶ್ರೂಷಾಣಾಧಿಕಾರಿ ದಿವ್ಯಾ ಪಿಂಟೋ ಸ್ವಾಗತಿಸಿ, ಶಿಕ್ಷಕಿ ಅಕ್ಷತಾ ವಂದಿಸಿ, ಶಿಕ್ಷಕಿ ವಿದ್ಯಾವತಿ ನಿರೂಪಿಸಿದರು.

Exit mobile version