Site icon Suddi Belthangady

ಬೆಳ್ತಂಗಡಿ: ಲಯನ್ಸ್ ಕ್ಲಬ್ ವತಿಯಿಂದ ರಿಕ್ಷಾ ಚಾಲಕರಿಗೆ ಸನ್ಮಾನ,ಪ್ರತಿಭಾ ಪ್ರೋತ್ಸಾಹ, ಹಿರಿಯರಿಗೆ ಗೌರವ ಕಾರ್ಯಕ್ರಮ

ಬೆಳ್ತಂಗಡಿ: ಸುವರ್ಣ ಮಹೋತ್ಸವ ವರ್ಷದಲ್ಲಿ ಮುನ್ನಡೆಯುತ್ತಿರುವ ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಮೂರು ಧರ್ಮದ ಹಿರಿಯ ಸಾಮಾಜಿಕ ಸೇವಾಕರ್ತರಾದ ರಿಕ್ಷಾ ಚಾಲಕರುಗಳಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಹಿರಿಯರ ಹುಟ್ಟುಹಬ್ಬ‌ ಸಂಭ್ರಮವನ್ನು ಆ.2 ರಂದು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ವಹಿಸಿದ್ದರು.ದೀರ್ಘ ವರ್ಷಗಳಿಂದ ಬೆಳ್ತಂಗಡಿ ನಗರ ಕೇಂದ್ರಿತವಾಗಿ ಕಾರ್ಯನಿರ್ವಹಿಸುತ್ತಿರುವ ಅಬೂಬಕ್ಕರ್ ಕಕ್ಯೇನ, ಬೊಮ್ಮಯ್ಯ‌ ಕುಲಾಲ್ ಮತ್ತು ಮಾರ್ಟಿನ್ ಡಿಸೊಜಾ ಇವರನ್ನು ಸನ್ಮಾನಿಸಿ ಸೌಹಾರ್ದ ಪರಂಪರೆ ಮೆರೆಯಲಾಯಿತು.ಇದರ‌ ಜೊತೆಗೆ ಎಸ್ಸೆಸ್ಸೆಲ್ಸಿ ಯಲ್ಲಿ ಫಲಿತಾಂಶದಲ್ಲಿ ಪ್ರತಿಭೆ ಮೆರೆದ ಇಂಚರಾ ಅವರನ್ನು ನಗದಿನೊಂದಿಗೆ ಪುರಸ್ಕರಿಸಲಾಯಿತು.ವಿ.ಆರ್ ನಾಯ್ಕ್ ಪ್ರತಿಭಾ ನಿಧಿಯ ಪ್ರಾಯೋಜಕರಾಗಿದ್ದರು.

ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯರಾಗಿದ್ದು 80 ನೇ ಹುಟ್ಟುಹಬ್ಬ ಆಚರಿಸಿದ ವಿ.ಆರ್ ನಾಯ್ಕ್ ಮತ್ತು 83 ನೇ ಹುಟ್ಟುಹಬ್ಬ ಆಚರಿಸಿದ ಎಂ.ಜಿ ಶೆಟ್ಟಿ ಅವರನ್ನು ವಿಶೇಷ ರೀತಿಯಲ್ಲಿ ಸಂಭ್ರಮಿಸಲಾಯಿತು
ಸುವರ್ಣ ಮಹೋತ್ಸವದ ಅಂಗವಾಗಿ ನವೀಕರಿಸುವ ಲಯನ್ಸ್ ಭವನದ ಕಟ್ಟಡ ಸಮಿತಿಗೆ ರಾಜಯ ಶೆಟ್ಟಿ ಅವರನ್ನು ಅಧ್ಯಕ್ಷರಾಗಿಯುಳ್ಳ ಸಮಿತಿ ರಚಿಸಲಾಯಿತು.
ಅಶ್ರಫ್ ಆಲಿಕುಂಞಿ ಮುಂಡಾಜೆ ವೇದಿಕೆಗೆ ಆಹ್ವಾನ‌‌ ನೀಡಿದರು. ವಿನ್ಸೆಂಟ್ ಡಿಸೋಜಾ ಧ್ವಜ ವಂದನೆ ನಡೆಸಿದರು. ಕಾರ್ಯದರ್ಶಿ ಅನಂತಕೃಷ್ಣ ವರದಿ ವಾಚಿಸಿದರು. ಪರಿಚಯವನ್ನು ಧರಣೇಂದ್ರ ಕೆ ಜೈನ್ ಮತ್ತು ಕೃಷ್ಣ ಆಚಾರ್ಯ ನಡೆಸಿದರು. ಕೋಶಾಧಿಕಾರಿ ಸುಭಾಷಿಣಿ ಧನ್ಯವಾದವಿತ್ತರು.

Exit mobile version