Site icon Suddi Belthangady

ಪುತ್ತೂರಿನ ಫ್ಯಾಷನ್ ಲೋಕದ ‘ಮಹಾ ರಾಧೋತ್ಸವ’- ರಾಧಾ’ಸ್‌ನಲ್ಲಿದೆ ಫ್ಯಾಶನ್ ಲೋಕದ ಮಹಾ ಉತ್ಸವ- ಮಾನ್ಸೂನ್ ಮೇಳ- ಅತೀ ದೊಡ್ಡ ಸಂಗ್ರಹ, ಅತೀ ಕಡಿಮೆ ಬೆಲೆ, ಪ್ರತೀ ದಿನ ಹೊಸ ಸಂಗ್ರಹ

ಪುತ್ತೂರು: ಜವುಳಿ ಉದ್ಯಮದಲ್ಲೇ ಹೊಸತನವನ್ನು ಪರಿಚಯಿಸುತ್ತಾ ಮನೆ ಮಾತಾಗಿರುವ ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್ ರಸ್ತೆಯ ರಾಧಾ’ಸ್‌ನಲ್ಲಿ ಫ್ಯಾಶನ್ ಲೋಕದ ಮಹಾ ಉತ್ಸವ ಮಾನ್ಯೂನ್ ಮೇಳ ಆ.1ರಂದು ಪ್ರಾರಂಭಗೊಂಡಿದೆ. ಮದುವೆ ಜವುಳಿ ಸೇರಿದಂತೆ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಎಲ್ಲಾ ರೀತಿಯ ರೆಡಿಮೇಡ್ ಉಡುಪುಗಳನ್ನು ಅತೀ ಕಡಿಮೆ ಬೆಲೆಯಲ್ಲಿ ತಮ್ಮದಾಗಿಸುವಕೊಳ್ಳುವ ಸುವರ್ಣಾವಕಾಶವನ್ನು ಸಮರ್ಪಿಸುತ್ತಿದೆ.
ಪ್ರತಿ ದಿನವೂ ಹೊಸ ಹೊಸ ಬಟ್ಟೆಗಳ ಸಂಗ್ರಹ, ವಿನೂತನ ಶೈಲಿಯ, ಕಣ್ಮನ ಸೆಳೆಯುವ ನವನವೀನ ಮಾದರಿಯ ಉಡುಪುಗಳು, ಅತೀ ಕಡಿಮೆ ಬೆಲೆಗೆ ದೊರೆಯಲಿದ್ದು, ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳನ್ನು ಖರೀದಿಸುವ ವಿಪುಲ ಅವಕಾಶವನ್ನು ರಾಧಾಸ್ ಮಳಿಗೆಯು ಕಲ್ಪಿಸಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯಲ್ಲಿ ತಮ್ಮ ಮನದಿಚ್ಚೆಯ ಉಡುಪುಗಳನ್ನು ಕೊಂಡುಕೊಳ್ಳುವ ವಿಪುಲ ಅವಕಾಶಗಳನ್ನು ನೀಡುತ್ತಿದ್ದು ಈ ವರ್ಷವೂ ಪ್ರಾರಂಭಗೊಂಡಿದ್ದು ಗ್ರಾಹಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ.


ಅತೀ ಕಡಿಮೆ ದರ, ಹೊಸ ಹೊಸ ಸಂಗ್ರಹ:
ಮಾನ್ಸೂನ್ ಮೇಳ-ಮಹಾ ಉತ್ಸವದಲ್ಲಿ ರೂ.115ರಿಂದ ಪ್ರಾರಂಭವಾಗುವ ವಿವಿಧ, ವೆರಾಟಿ, ವಿನ್ಯಾಸಗಳ ಚೂಡಿದಾರ್ ಟಾಪ್ ಗಳು,ಅತೀ ಕಡಿಮೆ ಬೆಲೆಯ ನೈಟಿಗಳು, ಗವನ್, ನೈಟ್ ಪ್ಯಾಂಟ್ ಗಳು, ರೂ.95ರಿಂದ ಪ್ರಾರಂಭವಾಗುವ ಟಿ-ಶರ್ಟ್ ಗಳು, ರೂ.40-750 ಬೆಲೆಯ ಮಕ್ಕಳ ಉಡುಪುಗಳು ಲಭ್ಯವಿದ್ದು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ. ಕಣ್ಮನ ಸೆಳೆಯುವ ಸೀರೆಗಳು, ಪುರುಷರ ಉಡುಪುಗಳು ಅತೀ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಸಾರಿ, ಚೂಡಿದಾರ್ ಪೀಸ್‌ಗಳು, ಕುರ್ತಿಸ್, ರೆಡಿಮೇಡ್ ಚೂಡಿದಾರ್‌ಗಳು, ನೈಟಿ, ಜಂಟ್ಸ್ ಪ್ಯಾಂಟ್-ಶರ್ಟ್ ಹಾಗೂ ಮಕ್ಕಳ ವೆಸ್ಟರ್ನ್ ಔಟ್‌ಫಿಟ್‌ಗಳು ಸೇರಿದಂತೆ ಎಲ್ಲಾ ಬಗೆಯ ನವ ನವೀನ ಮಾದರಿಯ ಉಡುಪುಗಳ ಬೃಹತ್ ಸಂಗ್ರಹವಿದೆ. ಫ್ಯಾಕ್ಟರಿಯಿಂದ ನೇರವಾಗಿ ಖರೀದಿಸಿದ ಉತ್ತಮ ಗುಣ ಮಟ್ಟದ ಉಡುಪುಗಳನ್ನು ಮಳಿಗೆಯಲ್ಲಿ ಗ್ರಾಹಕರಿಗೆ ಮಿತ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಹಿರಿಯ ಅನುಭವೀ ಸಿಬಂದಿಗಳಿಂದ ಗ್ರಾಹಕರ ಅಭೀಷ್ಟೆಗಳಿಗೆ ಅನುಗುಣವಾಗಿ ಮಳಿಗೆಯಲ್ಲಿ ಸಿಬ್ಬಂದಿಗಳು ನೀಡುತ್ತಿರುವ ಸೇವೆಯಿಂದಾಗಿ ಹೆಸರಾಂತ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೊಡುಗೆಗಳು ಅ.1ರಿಂದ 10 ದಿನಗಳ ಕಾಲ ನಡೆಯಲಿದೆ.ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮ್ಹಾಲಕರು ತಿಳಿಸಿದ್ದಾರೆ.
ಮದುವೆಯ ಎಕ್ಸ್‌ಕ್ಲೂಸಿವ್ ಕಲೆಕ್ಷನ್:
ಮದುವೆ ಸೀರೆಗಳ ಉತ್ತಮ ಆಯ್ಕೆಗೆ ರಾಧಾ’ಸ್ ಪ್ರಥಮ ಆಯ್ಕೆಯಾಗಿದೆ. ಮದುವೆಯ ಶೃಂಗಾರಕ್ಕೆ ಮನಮೋಹಕ ಸೀರೆಗಳ ಅಪೂರ್ವ ಸಂಗ್ರಹವು ಮಳಿಗೆಯಲ್ಲಿದೆ. ಪ್ರತಿ ದಿನ ಮದುವೆ ಜವುಳಿಯ ಹೊಸ ಸಂಗ್ರಹವಿರುವ ಪುತ್ತೂರಿನ ಏಕೈಕ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
1995ರಲ್ಲಿ ಕೋರ್ಟುರಸ್ತೆಯಲ್ಲಿ ಸಣ್ಣ ಅಂಗಡಿಯೊಂದರಲ್ಲಿ ಪ್ರಾರಂಭವಾದ ಜವುಳಿ ಉದ್ಯಮವು ಪುತ್ತೂರು ಜನತೆಯ ಅಗತ್ಯತೆಗಳಿಗೆ ತಕ್ಕಂತೆ ಉತ್ತಮ ಸೇವೆ ನೀಡುತ್ತಾ ಯಶಸ್ವಿಯಾಗುತ್ತಾ ಸಾಗಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 2005ರಲ್ಲಿ ಮಳಿಗೆಯನ್ನು ವಿಸ್ತರಿಸಿ, ಅದೇ ಕಟ್ಟಡದ ಮೇಲಂತಸ್ಥಿನಲ್ಲಿ ಮಳಿಗೆಯೊಂದನ್ನು ಪ್ರಾರಂಭಿಸಿದೆ. ತನ್ನ ವಿಶೇಷ ಸೇವೆಯ ಮೂಲಕ ಪುತ್ತೂರು ಮಾತ್ರವಲ್ಲದೇ ನೆರೆಹೊರೆಯ ತಾಲೂಕುಗಳಲ್ಲಿಯೂ ಮನೆ ಮಾತಾಗಿರುವ ರಾಧಾ’ಸ್ ತನ್ನ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವ ನಿಟ್ಟಿನಲ್ಲಿ 2013ರಲ್ಲಿ ವಿಸ್ತತ ಮಳಿಗೆಯನ್ನು ಪ್ರಾರಂಭಿಸಿದೆ. ಮೂರು ಅಂತಸ್ತಿನ ಮಳಿಗೆಯಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಉಡುಪುಗಳ ಪ್ರತ್ಯೇಕ ವಿಭಾಗಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು ಜಿಲ್ಲೆಯಾದ್ಯಂತ ತನ್ನ ಛಾಪು ಮೂಡಿಸಿದೆ.

Exit mobile version