Site icon Suddi Belthangady

ಕಲ್ಮಂಜ ಸ.ಪ್ರೌ.ಶಾಲೆಯ ಚಿತ್ರಕಲಾ ವಿಭಾಗದ ಶಿಕ್ಷಕ ಯಲ್ಲಪ್ಪ ತಲವಾರ್ ರಿಗೆ ಬೀಳ್ಕೊಡುಗೆ

ಕಲ್ಮಂಜ: ಸರಕಾರಿ ಪ್ರೌಢ ಶಾಲೆ ಕಲ್ಮಂಜ ಇಲ್ಲಿಯ ಚಿತ್ರಕಲಾ ವಿಭಾಗದ ಶಿಕ್ಷಕ ಯಲ್ಲಪ್ಪ ತಲವಾರ್ ಇವರು 15 ವರ್ಷಗಳ ಸುಧೀರ್ಘ ಕಾಲ ಸೇವೆ ಸಲ್ಲಿಸಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಪ್ರೌಢ ಶಾಲೆಗೆ ವರ್ಗಾವಣೆ ಹೊಂದಿದ್ದಾರೆ.

ಇವರಿಗೆ ಶಾಲೆಯ ಶಿಕ್ಷಕ ವೃಂದ, ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.

Exit mobile version