ಉಜಿರೆ: ಬೆಳ್ತಂಗಡಿ ತಾಲೂಕು ಅರೆ ಭಾಷೆ ಅಭಿಮಾನಿಗಳ ಸಂಘದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಜು.30ರಂದು ಉಜಿರೆಯ ಶಾರದ ಮಂಟಪದಲ್ಲಿ ನಡೆಯಿತು.
ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ ರವರು ದೀಪ ಪ್ರಜ್ವಲಿಸುವ ಜೊತೆಗೆ ಚೆನ್ನೆ ಮನೆ ಆಟ ಆಡುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ಅರೆ ಭಾಷೆ ಅಭಿಮಾನಿಗಳನ್ನು ಇಂತಹ ಕಾರ್ಯಕ್ರಮಗಳ ಮೂಲಕ ಸೇರಿಸುವ ಕಾರ್ಯವು ಬಹಳ ಸಂತೋಷವನ್ನು ನೀಡುತ್ತದೆ, ಇಂತಹ ಬೇರೆ ಬೇರೆ ಕಾರ್ಯಕ್ರಮಗಳನ್ನು ಬೆಳ್ತಂಗಡಿ ತಾಲೂಕಿನಲ್ಲಿ ನಡೆಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯದ ಸಾಹಿತಿ ಹಾಗೂ ಲೇಖಕಿ ಚಂದ್ರಾವತಿ ಬಡ್ಡಡ್ಕ ಇವರು ಆಟಿ ತಿಂಗಳಿನಲ್ಲಿ ಮಾಡುವ ತಿಂಡಿ ತಿನಿಸುಗಳ ಬಗ್ಗೆ, ವಿವಿಧ ಆಚರಣೆಯ ಬಗ್ಗೆ ಹಾಗೂ ಹಾಡಿನ ಮೂಲಕ ಮನದಟ್ಟಾಗುವ ಹಾಗೆ ಮಾತನಾಡಿದರು.
ಬೆಳ್ತಂಗಡಿ ತಾಲೂಕು ಅರೆ ಭಾಷೆ ಅಭಿಮಾನಿಗಳ ಸಂಘದ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ಅಧ್ಯಕ್ಷತೆ ವಹಿಸಿ, ಇನ್ನು ತಾಲೂಕಿನ ಮೂಲೆ ಮೂಲೆಯಲ್ಲಿರುವ ಅರೆ ಭಾಷೆ ಅಭಿಮಾನಿಗಳನ್ನು ಸೇರಿಸುವ ಕಾರ್ಯ ನಡೆಯಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕಿನ ಆಹಾರ ನಿರೀಕ್ಷಕ ಕೆ.ವಿಶ್ವ ಹಾಗೂ ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ ಎ.ಜಯದೇವ್ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಆರೋಗ್ಯ ಅಧಿಕಾರಿ ಡಾ.ಚಂದ್ರಕಾಂತ್, ಸುಭಾಷ್ ಚಂದ್ರ ಗೌಡ, ತಿಮ್ಮಪ್ಪ ಗೌಡ ಬನಂದೂರು, ತಾಲೂಕಿನ ಅರಭಾಷೆ ಅಭಿಮಾನಿ ಬಳಗದ ಉಪಾಧ್ಯಕ್ಷ ಧರ್ಮೇಂದ್ರ ಗೌಡ ಬೆಳಾಲು, ಕಮಲಾಕ್ಷಿ ಶಿವಯ್ಯ ಗೌಡ, ರವೀಂದ್ರನಾಥ ಗೌಡ ಕೊಯ್ಯುರು, ವಿದ್ಯಾ ಶ್ರೀನಿವಾಸ್ ಗೌಡ, ಪ್ರಕಾಶ್ ಗೌಡ ಅಪ್ರಮೇಯ, ಬಿ.ಆನಂದ ಗೌಡ, ಭರತ್ ಗೌಡ ಉಜಿರೆ, ಆನಂದ ಗೌಡ, ರಮೇಶ್ ಗೌಡ ಉಪಸ್ಥಿತರಿದ್ದರು.
ಅರೆಭಾಷೆ ಅಭಿಮಾನಿ ಬಳಗದ ವಿವಿಧ ಸದಸ್ಯರು ಸುಮಾರು 20 ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಂದು ಸೇರಿದ ಎಲ್ಲರೂ ಸಹ ಭೋಜನ ಮಾಡಿದರು.ಸವಿತಾ ಜಯದೇವ್ ಸ್ವಾಗತಿಸಿ, ಕಾರ್ಯದರ್ಶಿ ಉಷಾ ಲಕ್ಷ್ಮಣ ಗೌಡ ವಂದಿಸಿದರು.ನಿರೂಪಣೆಯನ್ನು ಭವ್ಯಶ್ರೀ ಕೀರ್ತಿರಾಜ್ ವಳಂಬ್ರ ನಿರ್ವಹಿಸಿದರು.