Site icon Suddi Belthangady

ಹತ್ಯಡ್ಕ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್ ರಿಗೆ ಬೀಳ್ಕೊಡುಗೆ ಸನ್ಮಾನ

ಅರಸಿನಮಕ್ಕಿ: ಜುಲೈ 30 ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್ ರವರಿಗೆ ಸಂಘದ ವಾರ್ಷಿಕ ಮಹಾಸಭೆ ನಡೆದ ಬಳಿಕ ಬೀಳ್ಕೊಡುಗೆ ಸನ್ಮಾನವನ್ನು ಸಂಘವು ಆಯೋಜಿಸಿತ್ತು. ನಿರ್ದೇಶಕರಾದ ಧರ್ಮರಾಜ.ಎ ರವರು ಶಾಸಕರನ್ನು ಸಭೆಗೆ ಸ್ವಾಗತಿಸಿದರು.ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ನಿರ್ದೇಶಕರುಗಳ ಉಪಸ್ಥಿತಿಯಲ್ಲಿ ಶ್ರೀ ತ್ಯಾಂಪಣ್ಣ ಶೆಟ್ಟಿಗಾರ್ ದಂಪತಿಗಳನ್ನು ಶಾಸಕರು ಸನ್ಮಾನಿಸಿದರು.

ನಂತರ ಮಾತನಾಡಿದ ಶಾಸಕರು ಸಂಘದ ಅಧ್ಯಕ್ಷರ ಕರೆಯ ಮೇರೆಗೆ ಸಭೆಗೆ ಬಂದೆ ತ್ಯಾಂಪಣ್ಣ ಶೆಟ್ಟಿಗಾರ್ ರ ಜೊತೆ ಶಿಬಾಜೆ ದೇವಳದ ಬ್ರಹ್ಮಕಲಶ ಸಂಧರ್ಭದಲ್ಲಿ ಕೆಲಸ ಮಾಡಿದ ನೆನಪು ಹಾಗೆ ಇದೆ. ಶ್ರೀಯುತರು ಎಲ್ಲರಿಗೂ ಸರಿಹೊಂದುವ ರೀತಿ ಕೆಲಸ ಮಾಡುತ್ತಾರೆ.ಧಾರ್ಮಿಕ ಕ್ಷೇತ್ರ ಸಾಮಾಜಿಕ ಕ್ಷೇತ್ರ ಯಾವುದೇ ಇರಲಿ ತ್ಯಾಂಪಣ್ಣ ಇದ್ದರೆ ಚಿಂತೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಕೆಲಸ ಮಾಡಿರುತ್ತಾರೆ ಎಂದು ಶ್ರೀಯುತರ ಹಾಗೂ ತನ್ನ ಸಂಬಂಧವನ್ನು ಮೆಲುಕು ಹಾಕಿದರು.ತ್ಯಾಂಪಣ್ಣನವರಿಗೆ ಇಲ್ಲಿಯ ನಾಲ್ಕು ಗ್ರಾಮದ ದೈವ ದೇವರುಗಳು ಆಯುರಾರೋಗ್ಯ ಕರುಣಿಸಲಿ ಎಂದು ನಾನು ಪ್ರಾರ್ಥಿಸುವೆ ಎಂದರು.ಉತ್ತಮವಾಗಿ ಸಹಕಾರಿ ಸಂಘವನ್ನು ಮುನ್ನಡೆಸುತ್ತಿರುವ ಅಧ್ಯಕ್ಷ ರಾಘವೇಂದ್ರ ನಾಯಕ್ ರವರಿಗೂ ಅಭಿನಂದಿಸಿದರು.

ಶ್ರೀಯುತರನ್ನು ಬೇರೆ ಬೇರೆ ಕಡೆಯ ಸಹಕಾರಿಸಂಘದ ಸಿಇಒ ಗಳು ಹಾಗೂ ಡಿಸಿಸಿ ಬ್ಯಾಂಕಿನ ವತಿಯಿಂದ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉನ್ನತಾಧಿಕಾರಿ ಸ್ಥಳೀಯರಾದ ಆನಂದ ಪೂಜಾರಿ ನೂಜಿ ಹಾಗೂ ಅನೇಕರು ಸನ್ಮಾನಿಸಿದರು.

ತ್ಯಾಂಪಣ್ಣನವರ ಸಹಸಿಬ್ಬಂದಿಗಳು ಸಂಘದ ಅಧ್ಯಕ್ಷರು ನಿರ್ದೇಶಕರುಗಳು ವಿಶೇಷ ಉಡುಗೊರೆ ನೀಡಿ ಸನ್ಮಾನಿಸಿದರು.

ನಿವೃತಿ ಭಾಷಣ ತ್ಯಾಂಪಣ್ಣ ಶೆಟ್ಟಿಗಾರ್ ಸಂಘದ ಸರ್ವ ಸದಸ್ಯರು ನನ್ನ ಉಸಿರು ಅವರು ನನ್ನ ಉಸಿರಾಗಿದ್ದರಿಂದ ಉತ್ತಮ ಸೇವೆ ಮಾಡಲು ಅವಕಾಶವಾಯಿತು ನನ್ನ ಸೇವೆ ನಿಮಗೆ ಸಂತೃಪ್ತಿಯಾಗಿದೆ ಎಂದು ಭಾಸವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಅನೇಕರನ್ನು ನೆನಪಿಸಿಕೊಂಡ ಶ್ರೀಯುತರು ದಂಬೆ ಸಬ್ರಾಯರಿಂದ ಹಿಡಿದು ದಿವಂಗತ ಅಡ್ಕಾರಿ ಜಗನ್ನಾತ ಗೌಡರು, ದಿವಂಗತ ಸಚಿದಾನಂದ ಭಟ್ ದಿವಂಗತ ಕಿನ್ನಿ ಗೌಡರು ಹಾಗೂ ಈಗಿನ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ರವರ ಸಹಕಾರದಿಂದ ಉತ್ತಮ ಸೇವೆ ನೀಡಲು ಸಾಧ್ಯವಾಯಿತು ಎಂದರು.

ವೇಧಿಕೆಯಲ್ಲಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ಉಪಾಧ್ಯಕ್ಷರಾದ ರಾಜು.ಕೆ ನಿರ್ದೇಶಕರುಗಳಾದ ಕೊರಗಪ್ಪ ಗೌಡ, ರತೀಶ್ ಬಿ (ಪ್ರಾಸ್ತಾವಿಕ ನುಡಿ) ಬಿ,ಧರ್ಮರಾಜ್ ಎ, ತಾರ. ಟಿ ಚಿಪ್ಲೂನ್ಕಾರ್, ಗಂಗಾವತಿ, ಬೇಬಿ,ನಾಗೇಶ್.ಜಿ, ಕುಶಾಲಪ್ಪ ಗೌಡ, ಬೇಬಿಕಿರಣ್, ಮುರಳೀಧರ ಶೆಟ್ಟಿಗಾರ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ರವರು ಉಪಸ್ಥಿತರಿದ್ದರು.

ಪ್ರವೀಣ್ ಕುಲಾಲ್ ಉಪರಡ್ಕ ಕಾರ್ಯಕ್ರಮ ನಿರೂಪಿಸಿದರು.

Exit mobile version