Site icon Suddi Belthangady

ನಡ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಆಟಿಡೊಂಜಿ ದಿನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ನಡ: ಗೌಡರ ಯಾನೆ ಒಕ್ಕಲಿಗರ ಸೇವಾ ಮಹಿಳಾ ಘಟಕ, ಯುವ ವೇದಿಕೆ “ಆಟಿಡೊಂಜಿ ದಿನ” ಮತ್ತು “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮ ಜು.30ರಂದು ನಡ ಸಮಾಜ ಮಂದಿರದಲ್ಲಿ ಜರುಗಿತು.

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾದ ಕುಶಾಲಪ್ಪ ಗೌಡ ದೀಪ ಪ್ರಜ್ವಲಿಸುವ ಜೊತೆಗೆ ಚೆನ್ನೆ ಆಟ ಆಡುವ ಮೂಲಕ ಚಾಲನೆ ನೀಡಿ, ಮಾತನಾಡುತ್ತಾ ನಮ್ಮ ಸಮುದಾಯದ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡಬೇಕು.ಜೊತೆಯಲ್ಲಿ ಆಟಿ ತಿಂಗಳ ಆಚರಣೆ, ದೀಪಾವಳಿ, ದೈವ-ದೇವರ ಆರಾಧನೆ, ನಂಬಿಕೆ, ಹಿಂದಿನ ಕಾಲದಿಂದ ಆಚರಣೆ ಮಾಡಿ ಕೊಂಡು ಬರುವ ಬಗ್ಗೆ ಮಕ್ಕಳಿಗೆ ಶಿಕ್ಷಣ ಜೊತೆಯಲ್ಲಿ ಮೈಗೂಡಿಸಿ ಕೊಳ್ಳುವಂತೆ ಪೋಷಕರು ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.

ಸ್ವಜಾತಿ ಬಂಧುಗಳ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಸ್ವಜಾತಿ ಬಂಧುಗಳ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಆಯೋಜಿಸಿದ ಸ್ಪರ್ಧೆ ವಿಜೇತರಿಗೆ ನೀಡಿ ಗೌರವಿಸಿದರು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕಿ ಶೀಲಾವತಿ ಧರ್ಮೇಂದ್ರ ಗೌಡ ಆಟಿ ತಿಂಗಳ ಮಹತ್ವದ ಬಗ್ಗೆ ತಿಳಿಸಿದರು.

ನಡ-ಕನ್ಯಾಡಿ ಗೌಡರ ಯಾನೆ ಒಕ್ಕಲಿಗರ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಹೇಮಾವತಿ ಸೋಮನಾಥ ಗೌಡ ಸಭೆಯ ಅಧ್ಯಕ್ಷೆ ವಹಿಸಿದ್ದರು.ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎಂ, ಯುವ ವೇದಿಕೆ ಅಧ್ಯಕ್ಷ ಯಶವಂತ ಗೌಡ ಬನಂದೂರು, ಸಂಘಟನ ಕಾರ್ಯದರ್ಶಿ, ನಡ ಗ್ರಾಮ ಸಮಿತಿ ಉಸ್ತುವಾರಿ ಪ್ರಮೋದ್ ಗೌಡ ದಿಡುಪೆ, ನಡ ಗ್ರಾಮದ ಸಮಿತಿ ಗೌರವ ಅಧ್ಯಕ್ಷ, ಫ್ರೌಡ ಶಾಲಾ ನಿವೃತ್ತ ಶಿಕ್ಷಕ ವಿವೇಕಾನಂದ ಗೌಡ ಭೋಜರ, ಯವ ವೇದಿಕೆ ಅಧ್ಯಕ್ಷ ವಸಂತ ಗೌಡ ಕೊಯಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಕ್ಕಲಿಗ ಗೌಡ ಜನಾಂಗ ಮತ್ತು ಆಟಿ ತಿಂಗಳ ಮಹತ್ವದ ಬಗ್ಗೆ ಮಕ್ಕಳಿಗೆ ರಸ ಪ್ರಶ್ನೆ ಹಾಗೂ ಮಕ್ಕಳು, ಮಹಿಳೆಯರಿಂದ ಭಕ್ತಿ ಗೀತೆ, ಭಾವಗೀತೆ ಮತ್ತು ಸಂಧಿ ಪಾಡ್ದನವನ್ನು ಉಪನ್ಯಾಸಕಿ ಉಮಾವತಿ ನಡೆಸಿಕೊಟ್ಟರು.ಸಂಘದ ಸದಸ್ಯರು ಮನೆಯಲ್ಲಿ ತಯಾರಿಸಿದ ಸುಮಾರು 20 ಕ್ಕೂ ಹೆಚ್ಚು ಬಗೆಯ ತಿಂಡಿ, ತಿನಿಸುಗಳನ್ನು ತಂದಿದ್ದರು.

ನಡ ಬೀಜದಡಿ ಮನೆ ನಿವೃತ್ತ ಸೈನಿಕ ಯೋಗೀಶ ಗೌಡ ದಂಪತಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಿದರು.2022-23 ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸ್ವಜಾತಿ ಮಕ್ಕಳ ಪ್ರತಿಭಾ ಪುರಸ್ಕಾರ, ವಿಧ್ಯಾರ್ಥಿಗಳಿಗೆ, ಮಹಿಳೆಯರಿಗೆ ಏರ್ಪಡಿಸಿದ ಆಟೋಟ ಸ್ಪರ್ಧಾ ವಿಜೇತರಿಗೆ ಬಹಮಾನ ನೀಡಿದರು.

ನಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ,ಗ್ರಾಮ ಸಮಿತಿ ಮಹಿಳಾ ಘಟಕ ಯುವ ವೇದಿಕೆ ಪದಾಧಿಕಾರಿಗಳು, ಸದಸ್ಯರು, ಹಾಗೂ ಸಮಾಜ ಬಾಂಧವರು ಭಾಗವಹಿಸಿ ಸಹಕರಿಸಿದರು.
ನಡ ಮಹಿಳಾ ಘಟಕ ಗೌರವಾಧ್ಯಕ್ಷರಾದ ಮಮತಾ ಶ್ರೀನಾಥ್ ಸ್ವಾಗತಿಸಿ, ರತ್ನಾವತಿ ಕಾರ್ಯಕ್ರಮ ನಿರೂಪಿಸಿ, ಮಹಿಳಾ ಕಾರ್ಯದರ್ಶಿ ತುಳಸಿ ಹರೀಶ್ ಚಂದ್ರ ಗೌಡ ವಂದಿಸಿದರು.

Exit mobile version