Site icon Suddi Belthangady

ಕರ್ನಾಟಕದ ಭರಣಮ್ ಗಾನಮ್ ನೆಲ್ಯಾಡಿಯಲ್ಲಿ ಸಂತ ಅಲ್ಫೋನ್ಸ ಜಾತ್ರ ಮಹೋತ್ಸವ ಸಂಪನ್ನ

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರಾರಂಭಿಕ ಪುಣ್ಯ ಕ್ಷೇತ್ರ ಸಂತ ಅಲ್ಫೋನ್ಸರವರ ಜಾತ್ರ ಮಹೋತ್ಸವವವು ಭಕ್ತಿ, ಶ್ರದ್ದೆ ಮತ್ತು ದೇವಾರಾದನೆಯಿಂದ ಸಾವಿರಾರು ಭಕ್ತರ ಆದ್ಯಾತ್ಮ ಚಿಂತನೆಗೆ ಬೆಳಕನ್ನು ಭಕ್ತರು ತಮ್ಮ ಇಷ್ಟ ಸಂತರಲ್ಲಿ ತಮ್ಮ ಹರಕೆ ಗಳನ್ನಿಟ್ಟು ಪ್ರಾರ್ಥಿಸಿ ಭಕ್ತಿಯ ಸಂತೃಪ್ತಿ ಯನ್ನು ಪಡೆದುಕೊಂಡರು.ಸಹನೆ ತ್ಯಾಗದ ಮೂಲಕ ವಿಶ್ವವನ್ನು ಗೆದ್ದ ಸಂತ ಅಲ್ಫೋನ್ಸ ಇಂದಿನ ಜಗತ್ತಿಗೆ ವಿಶೇಷವಾಗಿ ನೋವು ಸಹನೆ ಮಾತ್ಸರ್ಯ ಇವುಗಳಿಂದ ಕಲುಷಿತ ವಾದ ಪ್ರಪಂಚದಲ್ಲಿ ಸಹನೆ ಪ್ರೀತಿ ವಿಶ್ವಾಸಕ್ಕೆ ಬೆಲೆಯನ್ನು, ಈ ಪ್ರಪಂಚ ಗೆಲ್ಲುವವರ ಮತ್ತು ಜಯಶಾಲಿಯಾಗುವರದು ಮಾತ್ರವಲ್ಲ ಇತರರನ್ನು ಗೆಲ್ಲಿಸಲು ಇತರರಿಗೆ ಸಂತೋಷ ನೀಡಲು ಸ್ವಯಂಪ್ರೇರಿತ ಸೋಲಿನಲ್ಲಿ ಜೀವನದ ನಲಿವು ಕಳೆ ಕಂಡು ಕೊಂಡವಳೆ ಸಂತ ಅಲ್ಫೋನ್ಸ ಎಂದು ಪುಣ್ಯ ಕ್ಷೇತ್ರ ದ ಧರ್ಮ ಗುರುಗಳಾದ ವಂದನಿಯ ಫಾ. ಶಾಜಿ ಮಾತ್ಯು ತಿಳಿಸಿದರು.

ನವ ದಿನಗಳ ಮಹೋತ್ಸವ ದಲ್ಲಿಅಟ್ಟಪ್ಪಾಡಿ ಸಿಯೋನ್ ರಿಟ್ರೀಟ್ ತಂಡದ ದ್ಯಾನ ಕೂಟ ವಿಶೇಷ ಆಕರ್ಷಣೆಯಾಗಿತ್ತು. ದೇಶ ವಿದೇಶ ಗಳಿಂದ ಹರಕೆಯನ್ನಿಟ್ಟು ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಹಬ್ಬದ ಎಲ್ಲಾ ದಿನಗಳಲ್ಲೂ ಸಂತರ್ಪಣೆಯ ವ್ಯವಸ್ಥೆ ಒಂದು ವಿಶೇಷವಾಗಿತ್ತು.

ಅತಿ ವಂದನಿಯ ಮಕಾರಿಯೋಸ್ ಗೀ ವರ್ಗಿಸ್ ಪುತ್ತೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷರು, ವಂದನಿಯ ಧರ್ಮಗುರುಗಳಾದ ಉದನೆಯ ಫಾ.ಸಿಬಿ ಪನಚಿಕ್ಕಲ್, ವಂದನಿಯ ಫಾ.ವರ್ಗೀಸ್ ಪುದಿಯೇಡತ್, ವಂದನಿಯ ಫಾ ರೊಯ್ ಕೊಕ್ಕಡ, ವಂದನಿಯ ಫಾ.ಚೀರನ್, ಹಾಗೂ ಇತರೆ ಧರ್ಮ ಗುರುಗಳು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ಫಾ.ಜಿಬಿನ್ ಎಂ ಸಿ ಬಿ ಎಸ್ ಟ್ರಸ್ಟಿ ಗಳಾದ ಈಪನ್ ವರ್ಗೀಸ್ ನಿವ್ರತ್ತ ಪೊಲೀಸ್ ಅಧಿಕಾರಿ, ಶ್ರೀ ಜೋಬಿನ್ ಪರಪರಾಗತ್, ಬಿಜು ಪೆರುಮ್ ಪಳ್ಳಿ, ಟೊಮಿ ಮಟ್ಟಮ್, ಜೈಸನ್ ವಾಯಕ್ಕಾಲ ಎಸ್ ಎಂ ವೈ ಎಂ ಅಧ್ಯಕ್ಷರು, ಶ್ರೀಮತಿ ಜೆಸಿಂತ ಕೆ ಜೆ ಮೊದಲಾದವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

Exit mobile version