ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘ(ರಿ.)ಬೆಳ್ತಂಗಡಿ ಘಟಕದ ಸಾರಥ್ಯದಲ್ಲಿ ಜು.29 ರಂದು ಜಿಲ್ಲಾ ವಾರ್ಷಿಕ ಮಿಲನನೋತ್ಸವ 2023, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಮ್ಯುನಿಟಿ ಹಾಲ್ ನಲ್ಲಿ ಜರಗಲಿದೆ.ಕಾರ್ಯಕ್ರಮವನ್ನು ಪಾರೆಂಕಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ರಾವ್ ಪೇಜಾವರ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮ್ಹಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಬಾಬು ಕೆ.ವಿಟ್ಲ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ರಾಜ್ಯದ ಸಭಾಪತಿ ಯು.ಟಿ.ಖಾದರ್ ಮಾತನಾಡುತ್ತಾ ಶಾಮಿಯಾನ ಮಾಲಕರು ಸಮಾಜಕ್ಕೆ ಒಳ್ಳೆಯ ಸೇವೆ ಸಲ್ಲಿಸುವ ಜೊತೆಯಲ್ಲಿ, ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉನ್ನತವಾದ ಹುದ್ದೆಯಲ್ಲಿ ದೇಶದ ಸೇವೆ ಸಲ್ಲಿಸುವ ಒತ್ತು ನೀಡಬೇಕೆಂದು ಹೇಳಿದರು ಹಾಗೂ ತಮ್ಮ ಸಂಘದ ಅಭಿವೃದ್ಧಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.
ಮಾಜಿ ಶಾಸಕ ಕೆ. ವಸಂತ ಬಂಗೇರ,ಕುಂಡದಬೆಟ್ಟು ಜುಮ್ಮಾ ಮಸೀದಿ ಧರ್ಮಗುರು ಕೆ. ಎಂ. ಹನೀಫ್ ಸಖಾಫಿ ಬಂಗೇರಕಟ್ಟೆ, ಜಿಲ್ಲಾ ಪದಾಧಿಕಾರಿಗಳಾದ ನಿಶಿತ್ ಪೂಜಾರಿ ಮಂಗಳೂರು, ಬಾಲಕೃಷ್ಣ ಕದ್ರಿ ಮಂಗಳೂರು, ಶಿವ ಪ್ರಸಾದ ಹೆಗ್ಡೆ ಮೂಡಬಿದಿರೆ, ಸುಭಾಷ್ ಚಂದ್ರ ಜೈನ್ ಬಂಟ್ವಾಳ, ಕ್ಲೇವರ್ ಡಿ`ಸೋಜ ಮಂಗಳೂರು, ಹಾಜಿ ಅಬ್ದುಲ್ ಲತೀಫ್ ಬೆಳ್ತಂಗಡಿ, ಬೆಳ್ತಂಗಡಿ ಘಟಕ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಬಂಟ್ವಾಳ ಆರ್.ಟಿ.ಓ ಚರಣ್ ಕುಮಾರ್, ಬಂಟ್ವಾಳ ಘಟಕ ಅಧ್ಯಕ್ಷ ಪಿಯುಸ್ ಮ್ಯಾಕ್ಸಿಸ್ ಸಿಕ್ವೇರಾ, ಮಂಗಳೂರು ಘಟಕ ಅಧ್ಯಕ್ಷ ಯುವರಾಜ್ ಸುವರ್ಣ ಮೂಡಬಿದಿರೆಯ ಅಧ್ಯಕ್ಷ ಗಣಪತಿ ಪೈ, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ತಾಲೂಕು ಘಟಕಗಳ ಅಧ್ಯಕ್ಷರುಗಳು,ಸಂಘದ ಸದಸ್ಯರು, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.ವೇದಿಕೆಯಲ್ಲಿ ಮಕ್ಕಳಿಂದ ವಿವಿಧ ನೃತ್ಯ, ಭಾವಗೀತೆ ಭಕ್ತಿಗೀತೆ ಕಾರ್ಯಕ್ರಮದ ನಡೆಯಿತು.ಕುಮಾರಿ ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.