Site icon Suddi Belthangady

ಅರಸಿನಮಕ್ಕಿ: ಹೊಸ್ತೋಟ ಶಾಲಾ ಬಳಿ ರಸ್ತೆಗೆ ಮರ ಬಿದ್ದು ಸಂಚಾರ ಹಾಗೂ ವಿದ್ಯುತ್ ವ್ಯತ್ಯಯ

ಅರಸಿನಮಕ್ಕಿ: ಜು.28ರಂದು ಇಲ್ಲಿಯ ಹೊಸ್ತೋಟ ಶಾಲಾ ಬಳಿ ವಿದ್ಯುತ್ ಕಂಬದ ಮೇಲೆ ಬಿದ್ದ ಮರ ರಸ್ತೆಗೆ ಉರುಳಿ ಸುಮಾರು ಒಂದು ಗಂಟೆಗಳ ಕಾಲ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಅರಸಿನಮಕ್ಕಿ ನವಶಕ್ತಿಯ ಆಟೋ ಚಾಲಕ ಮಾಲಕರ ಸಂಘದ ಸದಸ್ಯರು, ಇನ್ನಿತರ ವಾಹನದ ಚಾಲಕರು, ಸಾರ್ವಜನಿಕರು ತೆರವುಗೊಳಿಸುವಲ್ಲಿ ಸಹಕರಿಸಿದರು.ಹಾಗೂ ವಿದ್ಯುತ್ ತಂತಿಯನ್ನು ಸರಿಪಡಿಸಲು ಪವರ್ ಮ್ಯಾನ್ ಗಳ ಜೊತೆಗೂ ಸಹಕರಿಸಿದರು.

Exit mobile version