Site icon Suddi Belthangady

ಉಜಿರೆ: ಎಸ್.ಡಿ.ಯಂ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಇಲೆಕ್ಟ್ರಾನಿಕ್ಸ್ ವಿಭಾಗದಿಂದ ಸಂಶೋಧನೆ ಮತ್ತು ಉದ್ಯೋಗಾವಕಾಶ ಕಾರ್ಯಕ್ರಮ

ಉಜಿರೆ: ಎಸ್.ಡಿ.ಯಂ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಹಳೆ ವಿದ್ಯಾರ್ಥಿಯೊಂದಿಗೆ ಇಲೆಕ್ಟ್ರಾನಿಕ್ಸ್ ವಿಭಾಗಲ್ಲಿ ಸಂಶೋಧನೆ ಮತ್ತು ಉದ್ಯೋಗಾವಕಾಶ ಎಂಬ ವಿಚಾರದಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಯಿತು.

ಇದರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಸ್ತುತ ಜಪಾನಿನ ರೆನೆಸಾಸ್ ಇಲೆಕ್ಟ್ರಾನಿಕ್ಸ್ ನಲ್ಲಿ ಡಿಸೈನ್ ಇಂಜಿನಿಯರ್ ಆಗಿರುವ ಕಾರ್ತಿಕ್‌ ಭಟ್ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಭಾಗ ಮುಖ್ಯಸ್ಥ ಡಾ.ಮಧುಸೂದನ್ ಸ್ವಾಗತಿಸಿ, ಪ್ರೋ.ಅಮಿತ್‌ಜೈನ್ ವಂದಿಸಿದರು.

Exit mobile version