Site icon Suddi Belthangady

ಉಜಿರೆ: ವಿದ್ಯಾರ್ಥಿಗಳಿಗೆ ಜೀವನ ಮೌಲ್ಯ ಮತ್ತು ಮೊಬೈಲ್ ಬಳಕೆಯ ಬಗ್ಗೆ ಮಾಹಿತಿ ಕಾರ್ಯಗಾರ

ಉಜಿರೆ: ಮಕ್ಕಳಲ್ಲಿ ಅತಿಯಾದ ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆಯಲ್ಲಿ ಮಾಹಿತಿ ಕಾರ್ಯಗಾರವನ್ನು ಶಾಲಾ ಸಭಾಭವನದಲ್ಲಿ ಜು.22ರಂದು ಏರ್ಪಡಿಸಲಾಯಿತು.

ಅತಿಯಾದ ಮೊಬೈಲ್ ಬಳಕೆಯು ಮಕ್ಕಳ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಗಾಢವಾದ ದುಷ್ಪರಿಣಾಮವನ್ನು ಬೀರುತ್ತಿದ್ದು, ಈ ವಿಚಾರವಾಗಿ ಪೋಷಕರು ವ್ಯಕ್ತಪಡಿಸಿರುವ ಕಳವಳವನ್ನು ಮನಗಂಡು ಈ ಬಗ್ಗೆ ಮಾಹಿತಿ ಕರ‍್ಯಾಗಾರವನ್ನು  ಹಮ್ಮಿಕೊಳ್ಳಲಾಯಿತು.

ಬಹುಮುಖ ಪ್ರತಿಭೆಯ ನುರಿತ ಸಂಪನ್ಮೂಲ ವ್ಯಕ್ತಿ ಹಾಗೂ ಆಪ್ತ ಸಮಾಲೋಚಕರಾದ ಶ್ರೀಯುತ ಸ್ಮಿತೇಶ್ ಬಾರ್ಯ ಇವರು ಆಗಮಿಸಿ, ಈ ಮಾಹಿತಿ ಕಾರ್ಯಗಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ನಡೆಸಿಕೊಟ್ಟರು.ಅವರು ಜೀವನ ಮೌಲ್ಯಗಳು ಹಾಗೂ ಮೊಬೈಲ್‌ ಅತಿಯಾದ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಸದ್ಬಳಕೆಯ ಬಗ್ಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮವನ್ನು ಸಂಘಟಿಸಿದ ಶಾಲಾ ಪ್ರಾಂಶುಪಾಲರಾದ ರೆ!ಫಾ!ವಿಜಯ್ ಲೋಬೋ ಇವರು ಪ್ರಾಸ್ತವಿಕ ನುಡಿಗೈದರು. ಕಾರ್ಯಕ್ರಮದ ನಿರ್ವಹಣೆ ಹಾಗೂ ವಂದನಾರ್ಪಣೆಯನ್ನು ಶಿಕ್ಷಕಿ ಶ್ರೀಮತಿ ವಿನಯಲತಾ ಇವರು ನಿರ್ವಹಿಸಿದರು.

Exit mobile version