Site icon Suddi Belthangady

ಲಯನ್ಸ್ ಕ್ಲಬ್‌ನಿಂದ ವಿಶಿಷ್ಟ ರೀತಿಯಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ- ಸಂಘದ ಸದಸ್ಯರಾದ 3 ಮಂದಿ ಮಾಜಿ ಸೈನಿಕರಿಗೆ ಅವರ ನಿವಾಸದಲ್ಲೇ ಗೌರವಾರ್ಪಣೆ

ಬೆಳ್ತಂಗಡಿ: ಕಾರ್ಗಿಲ್ ವಿಜಯದಿವಸದ ಆಚರಣೆಯ ಭಾಗವಾಗಿ ಇಡೀ ಸೈನಿಕ ಸಮುದಾಯಕ್ಕೆ ಗೌರವ ಸಲ್ಲಿಸುವ ದೃಷ್ಟಿಯಿಂದ ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಮೂರು ಮಂದಿ ಮಾಜಿ ಸೈನಿಕ ಸದಸ್ಯರ ನಿವಾಸಕ್ಕೇ ತೆರಳಿ ಜು.26 ರಂದು ಅವರನ್ನು ಗೌರವಿಸಲಾಯಿತು.


ಸುವರ್ಣ ಮಹೋತ್ಸವ ವರ್ಷದ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಮಾಜಿ ಸೈನಿಕ ಎ.ಕೆ ಶಿವನ್, ಜಗನ್ನಾಥ ಶೆಟ್ಟಿ ಉಜಿರೆ ಮತ್ತು ಕಾಂಚೋಡು ಗೋಪಾಲಕೃಷ್ಣ ಭಟ್ ಅವರನ್ನು ಅವರ ನಿವಾಸದಲ್ಲೇ ಮಡದಿ ಮತ್ತು ಹಿರಿಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಪುಳಕಿತರಾದ ಅವರು ಯುದ್ಧದ ವಿಚಾರ ಮತ್ತು ತಮ್ಮ ಸೈನಿಕ ಕರ್ತವ್ಯದ ದಿನಗಳನ್ನು ಮೆಲುಕು ಹಾಕಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಅನಂತಕೃಷ್ಣ, ಕೋಶಾಧಿಕಾರಿ ಶುಭಾಷಿಣಿ, ಲಯನ್ಸ್ ಹಿರಿ ಕಿರಿಯ ಸದಸ್ಯರುಗಳಾದ ರಾಮಕೃಷ್ಣ ಗೌಡ, ಧತ್ತಾತ್ರೇಯ ಗೊಲ್ಲ, ವಸಂತ ಶೆಟ್ಟಿ, ಧರಣೇಂದ್ರ ಕೆ ಜೈನ್, ಕಿರಣ್‌ ಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ ಬಳಂಜ, ಶ್ರೇಯಂ ಪ್ರಸಾದ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.

Exit mobile version