Site icon Suddi Belthangady

ಗೇರುಕಟ್ಟೆ ಮನ್‌ಶರ್‌ ವಿದ್ಯಾ ಸಂಸ್ಥೆಯಲ್ಲಿ ಇ.ವಿ.ಎಂ ಯಂತ್ರದ ಮೂಲಕ ವಿದ್ಯಾರ್ಥಿ ಸಂಘದ ಮತದಾನ

ಗೇರುಕಟ್ಟೆ: ಗೇರುಕಟ್ಟೆ ಸಯ್ಯದ್ ಉಮ್ಮರ್ ಅಸ್ಸಖಾಫ್ ತಂಗಳ್‌ರವರ ನೇತೃತ್ವದ ಮನ್‌ಶ‌ರ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್‌ನಲ್ಲಿ ಇತ್ತೀಚಿಗೆ ಇ.ವಿ.ಎಂ ಯಂತ್ರದ ಮೂಲಕ ವಿದ್ಯಾರ್ಥಿ ಸಂಘದ ಮತದಾನ ನಡೆಯಿತು.ಸರಕಾರ ನಡೆಸುವ ಮತದಾನದ ಕ್ರಮದಂತೆ, ನೀತಿ ಸಂಹಿತೆಯಿಂದ ಮೂಲಕ ಮತದಾನ ವಿವಿಧ ಹಂತಗಳ ಪ್ರಾಯೋಗಿಕವಾಗಿ ಮಾಡಿ ಮಕ್ಕಳಿಗೆ ತೋರಿಸಲಾಯಿತು.

ಸ್ಥಳೀಯ ಕಳಿಯ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಸಂಸ್ಥೆಯ ಉಪಾಧ್ಯಕ್ಷ ಅಹಮ್ಮದ್ ಮೋನ್ ಎರುಕಡಪ್ಪು ಮತಗಟ್ಟೆಗೆ ಭೇಟಿ ನೀಡಿ ಮಕ್ಕಳಿಗೆ ಚುನಾವಣಾ ಕ್ರಮಗಳ ಬಗ್ಗೆ ತಿಳಿ ಹೇಳಿ, ಮಕ್ಕಳಿಗೆ ಶುಭ ಹಾರೈಸಿ, ಆಶೀರ್ವದಿಸಿದರು.

ಚುನಾವಣೆಯಲ್ಲಿ 10 ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಹಬೀಬ್ ಶಾಲಾ ನಾಯಕನಾಗಿ, ಉಪನಾಯಕಿ ರಾಫಿಯಾ ಹಾಗೂ ವಿರೋಧ ಪಕ್ಷದ ನಾಯಕನಾಗಿ ಉನೈಸ್ ಆಯ್ಕೆಯಾದರು.ರಶೀದ್ ಕುಪ್ಪೆಟ್ಟಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಶಿಕ್ಷಣ ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ಧಳ ರವರ ಮಾರ್ಗದರ್ಶನದಲ್ಲಿ ಮತದಾನಕ್ಕೆ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು, ಸಹಕರಿಸಿದರು.

Exit mobile version