Site icon Suddi Belthangady

ರೆಖ್ಯ: ಮನೆಗೆ ಮರ ಬಿದ್ದು ಅಪಾರ ಹಾನಿ- ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಮುಂಚೂಣಿಯಲ್ಲಿ ದುರಸ್ತಿ ಕಾರ್ಯ

ರೆಖ್ಯಾ: ಇಲ್ಲಿಯ ಪರಕಳ ನಿವಾಸಿ ಶಾಲಿನಿ ಎಂಬವರ ಮನೆ ಮೇಲೆ ಮರ ಬಿದ್ದು ಮನೆಯ ಮೇಲ್ಛಾವಣಿಯ ಸಿಮೆಂಟ್ ಶೀಟ್ ಸಂಪೂರ್ಣವಾಗಿ ಒಡೆದು ಅಪಾರ ಹಾನಿ ಉಂಟಾಗಿದೆ.

ಜುಲೈ 25ರಂದು ಮುಂಜಾನೆ 5ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ.ಈ ಹೊತ್ತಿಗೆ ತಾಯಿ ಮಗಳು ಇಬ್ಬರೇ ಇದ್ದುದರಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.ವಿಷಯ ತಿಳಿದು ಶ್ರೀ ಲಕ್ಷ್ಮೀ ಮೆಡಿಕಲ್ ಕೊಕ್ಕಡ ಇದರ ಮಾಲಕರಾದ ಸುವಿನ್ ರವರು ತಮ್ಮ ಅಧ್ಯಕ್ಷತೆಯ ಶಿರಾಡಿ ಗ್ರಾಮ ವಿಕಾಸ ತಂಡದೊಂದಿಗೆ ಆಗಮಿಸಿ ಅರಸಿನಮಕ್ಕಿ ಪಂಚಾಯತ್ ಅಧ್ಯಕ್ಷರಾದ ನವೀನ್ ರವರ ಹಾಗೂ ಪಂಚಾಯತ್ ಸದಸ್ಯರಾದ ಕಿರಣ್ ಕೆರೆಜಾಲ್ ಇವರ ಸಂಪೂರ್ಣ ಸಹಕಾರದೊಂದಿಗೆ ಶೌರ್ಯ ವಿಪತ್ತು ನಿರ್ವಹಣಾ ತಂಡ ಧರ್ಮಸ್ಥಳ ಇವರ ಮುಂಚೂಣಿಯಲ್ಲಿ ಮನೆಯ ದುರಸ್ತಿ ಕೆಲಸ ನಡೆಸಿದರು.

ಈ ಸಂಧರ್ಭದಲ್ಲಿ ಮರ ತೆರವು ಮಾಡಲು ಅರಣ್ಯ ಇಲಾಖೆಯ ಫಾರೆಸ್ಟ್ ಸಂತೋಷ್ ಹಾಗೂ ಗಾರ್ಡ್ ಲಿಂಗಪ್ಪರವರು ಸಹಕರಿಸಿದರು.ದುರಸ್ಥಿ ಕೆಲಸದಲ್ಲಿ ಶೌರ್ಯ ವಿಪತ್ತು ತಂಡದ ಅವಿನಾಶ್ ಭಿಡೆ, ಆನಂದ್, ಸಚಿನ್, ಕುಶಾಲಪ್ಪ ಗೌಡ, ಕೃಷ್ಣಪ್ಪ, ರಮೇಶ್ ಹಾಗೂ ಶಿರಾಡಿ ಗ್ರಾಮ ವಿಕಾಸ ತಂಡದ ಅಧ್ಯಕ್ಷ ಸುವಿನ್ .ಡಿ ಕುದ್ಕೊಳಿ, ಸದಸ್ಯರಾದ ಹೊನ್ನಪ್ಪ ಕುದ್ಕೊಳಿ, ಧರ್ಮಪಾಲ ಕುದ್ಕೊಳಿ, ಗಂಗಾಧರ ಕುದ್ಕೊಳಿ
ಧನುಷ್ ಕುದ್ಕೊಳಿ, ಕಿಶನ್ ಕುದ್ಕೊಳಿ ಸಹಕರಿಸಿದರು.

Exit mobile version