ಬೆಳ್ತಂಗಡಿ: ಹೊಸ ಕರ್ನಾಟಕ ಸರ್ಕಾರ ಬಂದ ನಂತರ ಮೊದಲ ಅಧಿವೇಶನದಲ್ಲಿ ಜನರ ನಿರೀಕ್ಷೆಗೆ, ಸಮಸ್ಯೆಗೆ ಉತ್ತರ ಕೊಡದೆ ರಾಜ್ಯದ ಬಜೆಟ್ ನಲ್ಲಿ 37 ಭಾರಿ ಕೇಂದ್ರ ಹಾಗೂ ರಾಜ್ಯವನ್ನು ಟೀಕೆ ಮಾಡುವಂತೆ ಇತ್ತು.ರಾಜ್ಯದ ಯಾವುದೇ ಅಭಿವೃದ್ಧಿಗೆ ಒತ್ತು ಕೊಡದೆ ಐದು ಗ್ಯಾರಂಟಿಗಳನ್ನು ಬಿಂಬಿಸಿ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ದೂರುವ ಬಜೆಟ್ ಆಗಿತ್ತು ಎಂದು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಬೆಳ್ತಂಗಡಿಯ ಮಂಜುನಾಥೇಶ್ವರ ಕಲಾ ಭವನದಲ್ಲಿ ಜು.25 ರಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯರವರು 14 ನೇ ಬಾರಿ ಮಂಡಸುವ ಬಜೆಟ್ ಆಗಿದ್ದು, ಜನರ ಒಪ್ಪುವಂತದ್ದು ಅಲ್ಲ.ಐದು ಗ್ಯಾರಂಟಿಯ ವಿಚಾರದ ಒಳಗೆಯೇ ಬಜೆಟ್ ಗಿರಕಿ ಹೊಡೆಯುತ್ತಿತ್ತು.ಬಜೆಟ್ ನ್ಯಾಯ ಕೊಡಲಿಲ್ಲ ಅನ್ಯಾಯವನ್ನೇ ತೋರಿಸುತ್ತದೆ ಎಂದು ಹೇಳಿದರು.
ಅರ್ಧ ಸತ್ಯಗಳನ್ನು ಷೋಷಿಸಿ ಜನರಿಗೆ ಅಸ್ಪಷ್ಟತೆಯನ್ನು ಉಂಟು ಮಾಡಿದ್ದಾರೆ.ಶಿಕ್ಷಣ ಇಲಾಖೆ ಒಂದಕ್ಕೇ ಹಿಂದಿಗಿಂತ 13% ದಷ್ಟು ಕಡಿಮೆ ಹಣವನ್ನು ಮೀಸಲಿಟ್ಟಿದ್ದು, ನೀರಾವರಿಗೆ ರೂ10ಸಾವಿರ ಕೋಟಿ ಮಾತ್ರ ಬಜೆಟ್ ನಲ್ಲಿ ಇಟ್ಟಿದ್ದಾರೆ.
ಇದರಿಂದ ರಾಜ್ಯದ ಅಭಿವೃದ್ಧಿಯೂ ಕುಂಠಿತವಾಗುತ್ತದೆ.ಹಿಂದಿನ ಬಿಜೆಪಿ ಸರ್ಕಾರದ ಪ್ರಮುಖ ಯೋಜನೆಗಳಾದ ವಿದ್ಯಾನಿಧಿ, ಕಿಸನ್ ಸಮ್ಮಾನ್ ಯೋಜನೆ, ಗೋಶಾಲೆ ಹೀಗೆ 32 ಯೋಜನೆಗಳನ್ನು ನಿಲ್ಲಿಸಿದ್ದಾರೆ.
ದ.ಕ ಜಿಲ್ಲೆಯವರೇ ಆದ ಯು.ಟಿ ಖಾದರ್ ವಿಧಾನ ಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದಾಗ ಎಲ್ಲರೂ ಸಂತೋಷ ಪಟ್ಟಿದ್ದರು.ಅದರೆ ಅವರು ಆ ಸ್ಥಾನದ ಗೌರವಕ್ಕೆ ಚ್ಯುತಿ ಬರುವಂತೆ ಮಾಡುತ್ತಿದ್ದಾರೆ.
ಪಕ್ಷಪಾತದ ನೀತಿ ಅನುಸರಣೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳನ್ನು ಕಾಂಗ್ರೆಸ್ ಪಕ್ಷದವರಂತೆ ನೋಡಿಕೊಳ್ಳುತ್ತಿದ್ದರು ಎಂದರು.
ಸಮಾಜಘಾತುಕರಿಗೆ ಈ ಸರ್ಕಾರ ಬಂದ ಮೇಲೆ ಶಕ್ತಿ ಬಂದ ಹಾಗೆ ಆಗಿದೆ.ಕಾಂಗ್ರೆಸ್ ಪಕ್ಷಕ್ಕೂ, ಸಮಾಜ ಘಾತುಕ ಶಕ್ತಿಗೂ ಸಂಭಂದ ಇದ್ದ ಹಾಗೆ ಇದೆ.
ಮಣಿಪುರದ ಮಹಿಳೆಯ ಮೇಲೆ ಆದ ದೌರ್ಜನ್ಯವನ್ನು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಖಂಡಿಸುತ್ತಿದೆ.ಇದಕ್ಕೆ ಲೋಕಸಭಾ ಚುನಾವಣೆಗೋಸ್ಕರ ಕಾಂಗ್ರೆಸ್ ರಾಜಕೀಯ ಬಣ್ಣ ನೀಡುತ್ತಿದೆ ಎಂದರು.
ಇನ್ನೂ ಸೌಜನ್ಯ ವಿಚಾರದಲ್ಲಿ ಜನರ ಭಾವನೆಯನ್ನು ಸರ್ಕಾರಕ್ಕೆ ಮುಟ್ಟುವ ವಿಚಾರ ಮಾಡಿದ್ದೇವೆ. ಮುಖ್ಯ ಮಂತ್ರಿಗಳಿಗೆ ಶಾಸಕ ಹರೀಶ್ ಪೂಂಜ ಹಾಗೂ ನಾನು ಮನವಿಯನ್ನು ಸಲ್ಲಿಸಿದ್ದೇವೆ.ಸೌಜನ್ಯ ಅವರ ಪೋಷಕರಿಗೆ ನ್ಯಾಯದ ನಿಟ್ಟಿನಲ್ಲಿ ನಮ್ಮದು ಆಗ್ರಹ ಇದೆ ತಿಳಿಸಿದರು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಒಳ ಜಗಳ ಕುರಿತು ಮಾತನಾಡಿ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ನಲ್ಲಿ ಈಗ ನಾಲ್ಕೈದು ಬಾಗಿಲುಗಳು ಆಗಿದೆ.ಹಿಂದೆ ಇತ್ತು ಆದರೆ ಇಷ್ಟು ಬಾಗಿಲುಗಳು ಇರಲಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮಿ ಜನಾರ್ದನ್, ಸಹಕಾರ ಭಾರತಿ ತಾಲೂಕು ಅಧ್ಯಕ್ಷ ರಾಜೇಶ್ ಪೆರ್ಮುಡ ಉಪಸ್ಥಿತರಿದ್ದರು.