Site icon Suddi Belthangady

ಬ್ಯಾಂಕ್ ಆಫ್ ಬರೋಡದ 116ನೇ ಸಂಸ್ಥಾಪನ ದಿನದ ಅಂಗವಾಗಿ ಪುದುವೆಟ್ಟು ಶ್ರೀ.ಧ.ಮಂ.ಅ.ಹಿ.ಪ್ರಾ.ಶಾಲೆಗೆ ಶಾಲಾ ಸೂಚನಾ ಫಲಕ ಹಾಗೂ ವೈರ್ಲೆಸ್ ಸೌಂಡ್ ಬಾಕ್ಸ್ ಕೊಡುಗೆ

ಪುದುವೆಟ್ಟು: ಬ್ಯಾಂಕ್ ಆಫ್ ಬರೋಡದ 116ನೇ ಸಂಸ್ಥಾಪನ ದಿನದ ಅಂಗವಾಗಿ, ಬ್ಯಾಂಕ್ ಆಫ್ ಬರೋಡ ಧರ್ಮಸ್ಥಳದ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಶಾಲೆಗೆ ಉಚಿತವಾಗಿ ಒಂದು ಶಾಲಾ ಸೂಚನಾ ಫಲಕ ಹಾಗೂ ವೈರ್ಲೆಸ್ ಸೌಂಡ್ ಬಾಕ್ಸ್ ನ್ನು ಕೊಡುಗೆಯಾಗಿ ನೀಡಿ ಸಹಕರಿಸಿದರು.

ಬ್ಯಾಂಕ್ ಆಫ್ ಬರೋಡ ಧರ್ಮಸ್ಥಳದ ಮ್ಯಾನೇಜರ್ ಆದ ಅಮರೇಶ್, ಸಿಬ್ಬಂದಿಗಳಾದ ಅಶ್ವಿತ್ ಶೆಟ್ಟಿ, ಶ್ರೀಯುತ ಧನಂಜಯ್, ಹರ್ಷಿತ್ ಶಾಲೆಗೆ ಆಗಮಿಸಿ ಶಾಲಾ ಮುಖ್ಯ ಶಿಕ್ಷಕರಾದ ಶೀನಪ್ಪ ಗೌಡ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅಮರೇಶ್ ರವರು ಮಕ್ಕಳು ಅಂದರೆ ದೇವರಿಗೆ ಸಮಾನರಾದವರು.ಮುಗ್ದ ಮನಸಿನ ಈ ಮಕ್ಕಳು ನಿರ್ಮಲ ಮನಸ್ಸಿನಿಂದ ಕೂಡಿರುತ್ತಾರೆ.ಪ್ರಾಥಮಿಕ ಶಾಲೆಗಳು ಎಂದರೆ ತುಂಬಾ ಪ್ರೀತಿ.ಎಸ್. ಡಿ. ಎಂ ಶಿಕ್ಷಣ ಸಂಸ್ಥೆಯ ಮೇಲೆ ಅಪಾರವಾದ ಗೌರವವಿದೆ.ಹೀಗಾಗಿ ನಾವು ಈ ಶಾಲೆಗೆ ನೋಟೀಸ್ ಬೋರ್ಡ್ ಮತ್ತು ಸೌಂಡ್ ಬಾಕ್ಸ್ ನೀಡಿದ್ದೇವೆ ಎಂದು ಅಭಿಮಾನದ ಮಾತುಗಳನ್ನು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಶೀನಪ್ಪ ಗೌಡ ರವರು ಮಕ್ಕಳೆಲ್ಲರೂ ಕೂಡ ಇವತ್ತು ನೀಡಿದ ಕೊಡುಗೆಯನ್ನು ಶಿಕ್ಷಣದ ಉದ್ದೇಶಕ್ಕಾಗಿ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿ, ಬ್ಯಾಂಕ್ ಆಫ್ ಬರೋಡ ಧರ್ಮಸ್ಥಳದ ಮ್ಯಾನೇಜರ್ ಮತ್ತು ಎಲ್ಲಾ ಸಿಬ್ಬಂದಿಗಳನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಬ್ಯಾಂಕ್ ಆಫ್ ಬರೋಡ ಧರ್ಮಸ್ಥಳ ದ ವತಿಯಿಂದ ಚಾಕಲೇಟ್ ನೀಡಿದರು.

ಕಾರ್ಯಕ್ರಮದಲ್ಲಿ ಪವನ್ ಕುಮಾರ್ ಸ್ವಾಗತಿದರು.ಸುಜಾತಾ ಬಿ ರವರು ಧನ್ಯವಾದಗೈದ ಕಾರ್ಯಕ್ರಮವನ್ನು ನಿಶಾಂತ್ ಕುಮಾರ್ ನಿರೂಪಿಸಿದರು.ಶಾಲೆಯ ಎಲ್ಲಾ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

Exit mobile version