Site icon Suddi Belthangady

ಪದ್ಮುಂಜ: ವರ್ಗಾವಣೆಗೊಂಡ ಮೂವರು ಅಧ್ಯಾಪಕರಿಗೆ ಬೀಳ್ಕೊಡುಗೆ ಸಮಾರಂಭ

ಪದ್ಮುಂಜ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪದ್ಮುಂಜ ಇಲ್ಲಿ ಹಲವು ವರ್ಷ ಕರ್ತವ್ಯ ನಿರ್ವಹಿಸಿ ಬೇರೆ ಬೇರೆ ಶಾಲೆಗಳಿಗೆ ವರ್ಗಾವಣೆ ಹೊಂದಿರುವ ಪ್ರಭಾರ ಮುಖ್ಯ ಶಿಕ್ಷಕಿ ಗಿರಿಜ ಕಾರಿಂಜ ಶಾಲೆಗೆ, ಪದ್ಮಾವತಿ ಕುಪ್ಪೆಟ್ಟಿ ಶಾಲೆಗೆ, ಕೇಶವ ಗೌಡ ಗೋವಿಂದೂರು ಶಾಲೆಗೆ ವರ್ಗಾವಣೆಗೊಂಡಿದ್ದು ಇವರನ್ನು ಬೀಳ್ಕೊಡುವ ಕಾರ್ಯಕ್ರಮ ಜು.19 ರಂದು ಪದ್ಮುಂಜ ಶಾಲೆಯಲ್ಲಿ ಜರುಗಿತು.

ಇದೀಗ ಪ್ರಭಾರ ಅಧ್ಯಾಪಕಿ ಅಧಿಕಾರ ಸ್ವೀಕರಿಸಿದ ಕೀರ್ತಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಮೂರು ಅಧ್ಯಾಪಕ ವರ್ಗಾವಣೆಯಿಂದ ವಿಧ್ಯಾರ್ಥಿಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ವಿವರಿಸಿದರು.ವರ್ಗಾವಣೆ ಗೊಂಡ ಮೂವರು ಅಧ್ಯಾಪಕರು ಮಾತನಾಡಿ ತಮ್ಮ ಸೇವಾ ಅವಧಿಯಲ್ಲಿ ನಡೆದ ಸಿಹಿ ಕಹಿ ಅನುಭವಗಳನ್ನು ಹಂಚಿಕೊಂಡರು.

ಎಸ್.ಡಿ.ಎಂ.ಸಿ ಸದಸ್ಯರಾದ ಕಾಸಿಂ ಪದ್ಮುಂಜ, ಸೀತಾರಾಮ ಮಡಿವಾಳ, ಗೀತಾ ಶೆಟ್ಟಿ ಅಧ್ಯಕ್ಷ ಪುರುಷೋತ್ತಮ ಮಾತನಾಡಿ ಶುಭ ಹಾರೈಸಿದರು.

ಈ ಸಂದರ್ಭ ವರ್ಗಾವಣೆಗೊಂಡ ಮೂವರು ಅಧ್ಯಾಪಕರಿಗೆ ನೆನಪಿನ ಕಾಣಿಕೆ ಶಾಲು ಫಲಪುಷ್ಪ ನೀಡಿ ಗೌರವಿಸಲಾಯಿತು.ವರ್ಗಾವಣೆ ಅಧ್ಯಾಪಕರು ಅವರ ವತಿಯಿಂದ ಗೋಡ್ರೇಜೊಂದನ್ನು ಕೊಡುಗೆಯಾಗಿ ಶಾಲೆಗೆ ನೀಡಿದರು.

Exit mobile version