Site icon Suddi Belthangady

ಹೊಸಂಗಡಿ: ಗಾಳಿ ಮಳೆಗೆ ಐದು ಮನೆಗಳಿಗೆ ಹಾನಿ

ಹೊಸಂಗಡಿ: ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಕೋಡಿ ಗ್ರಾಮದ ಹಲವೆಡೆ ಜು.24 ರಂದು ಸುರಿದ ಭಾರೀ ಮಳೆ ಮತ್ತು ಗಾಳಿಗೆ ಐದು ಮನೆಗಳು ಮತ್ತು ಆಸ್ತಿ ಪಾಸ್ತಿಗೆ ಹಾನಿಯುಂಟಾಗಿದೆ.

ಕಂಬಲದಡ್ಡ ನಿವಾಸಿ ಸುಂದರ ಕೆ, ಪ್ರೇಮ ಪೂವಪ್ಪ, ಜಯಶ್ರೀ ಜೈನ್, ಲೋಕಯ್ಯ ಇವರ ಮನೆಗಳ ಶೀಟ್, ಹೆಂಚು ಗಾಳಿಗೆ ಹಾರಿ ಹೋಗಿವೆ.ಬೂಬರವರ ಹಟ್ಟಿ ಗಾಳಿಗೆ ಜಕಂಗೊಂಡಿದ್ದು, ಜಯಶ್ರೀ ಜೈನ್ ಇವರ ಪಂಪು ಶೆಡ್ಡಿನ ಶೀಟ್ ಹಾರಿ ಹೋಗಿದೆ.ಅಲ್ಲಲ್ಲಿ ವಿದ್ಯುತ್ ಕಂಬಗಳು ದರಾಶಯಿ ಆಗಿವೆ.

ಪಂಚಾಯತ್ ಅಧ್ಯಕ್ಷ ಕರುಣಾಕರ ಪೂಜಾರಿ, ಪಿ ಡಿ ಒ ಗಣೇಶ್ ಶೆಟ್ಟಿ ಮತ್ತು ಗ್ರಾಮ ಕರಣಿಕರು ಸ್ಥಳಕ್ಕೆ ತಕ್ಷಣ ಭೇಟಿ ನೀಡಿದರು.

Exit mobile version