Site icon Suddi Belthangady

ಪೆರಾಲ್ದರಕಟ್ಟೆ ಸ್ವಲಾತ್ ಕಮಿಟಿಯ ನೂತನ ಆಡಳಿತ ಸಮಿತಿ ರಚನೆ

ತೆಂಕಕಾರಂದೂರು :ಬದ್ರೀಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಇದರ ಅಂಗ ಸಂಸ್ಥೆ ಸ್ವಲಾತ್ ಕಮಿಟಿ ಪೆರಾಲ್ದರಕಟ್ಟೆ ಇದರ ವಾರ್ಷಿಕ ಮಹಾಸಭೆ ಜು. 21 ರಂದು ಶಾದಿಮಹಲ್‌ ಸಭಾಂಗಣ ಪೆರಾಲ್ದರಕಟ್ಟೆ ಯಲ್ಲಿ ಬದ್ರಿಯಾ ಆಡಳಿತ ಸಮಿತಿ ಪೆರಾಲ್ದರಕಟ್ಟೆ ಇದರ ಅಧ್ಯಕ್ಷ ನವಾಜ್ ಶರೀಫ್ ಕಟ್ಟೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳೆದ ಆಡಳಿತಾವಧಿಯ ಅಭಿವೃದ್ಧಿ ಕಾರ್ಯಗಳನ್ನು ಸ್ವಲಾತ್ ಕಮಿಟಿ ಅದ್ಯಕ್ಷದಾವೂದ್ ಸಾಹೇಬ್ ಮಂಜೋಟ್ಟಿ ವಿವರಿಸಿದರು. ಹಾಗೂ 2022-23ನೆ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಪ್ರದಾನ ಕಾರ್ಯದರ್ಶಿ ಪಿ.ಕೆ ಆದಂ ಮಂಜೋಟ್ಟಿ ಮಂಡಿಸಿದರು.ಸಭೆಯಲ್ಲಿ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಸಿದ್ದಿಕ್ ಮಸೀದಿ ಬಳಿ ಆಯ್ಕೆಯಾದರು.ಗೌರವ ಅಧ್ಯಕ್ಷ‌ರಾಗಿ ಅಬ್ದುಲ್ ಕರೀಂ ಕಾರಂದೂರು, ಪ್ರಧಾನ ಕಾರ್ಯದರ್ಶಿಯಾಗಿ ಹಮೀದ್ ಬಾವಿಬಳಿ, ಕೋಶಾಧಿಕಾರಿಯಾಗಿ ದಾವೂದ್ ಸಾಹೇಬ್ ಮಂಜೋಟ್ಟಿ, ಉಪಾಧ್ಯಕ್ಷರಾಗಿ ಹಸನ್ ಗಿಂಡಾಡಿ ಮತ್ತು ಸಿರಾಜ್ ಮಂಜೋಟ್ಟಿ , ಕಾರ್ಯದರ್ಶಿಯಾಗಿ ಪಿ.ಕೆ.ಶಮದ್ ಕಟ್ಟೆ ಆಯ್ಕೆಯಾದರು.
ಸಮಿತಿಯ ಸದಸ್ಯರಾಗಿ ಪಿ.ಕೆ ಆದಂ ಮಂಜೋಟ್ಟಿ, ಶಮೀಮ್ ಮದ್ದಡ್ಕ, ಸುಲೈಮಾನ್ ಕಟ್ಟೆ, ಬಶೀರ್ ಮಸೀದಿಬಳಿ, ಇಬ್ರಾಹಿಂ ತಮುನಾಕ ಮಂಜೋಟ್ಟಿ, ನವಾಜ್ ಶರೀಫ್ ಕಟ್ಟೆ, ಸಾದಿಕ್ ಮಸೀದಿಬಳಿ, ಬಶೀರ್ ವೇಣೂರು, ಕಮರುದ್ದೀನ್ ಮಸೀದಿಬಳಿ ಮತ್ತು ಪಿ.ಕೆ ಶರೀಫ್ ಮಂಜೋಟ್ಟಿ ಆಯ್ಕೆಯಾದರು.

Exit mobile version