Site icon Suddi Belthangady

ಕಳಿಯ ಬೆರ್ಕೆತೋಡಿಯಲ್ಲಿ ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಹಾನಿ

ಕಳಿಯ: ಕಳಿಯ ಗ್ರಾಮದ ಬೆರ್ಕೆತ್ತೋಡಿ ಬಾಕಿಮಾರು ಎಂಬಲ್ಲಿ ಬೃಹತ್ ಗಾತ್ರದ ಆಲದ ಮರ ಪಕ್ಕದ ನಿವಾಸಿ ಗಿರಿಯಪ್ಪ ಗೌಡರವರ ಮನೆ ಮೇಲೆ ಬಿದ್ದು ಹಾನಿಯಾಗಿದೆ.ಸುಮಾರು 4 ವಿದ್ಯುತ್ ಕಂಬ ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಪಂಚಾಯತ್ ರಸ್ತೆಯು ಸಂಪೂರ್ಣ ಬಂದ್ ಆಗಿದೆ.

ಸ್ಥಳೀಯ ಪಂಚಾಯತ್ ಸದಸ್ಯರಾದ ಹರೀಶ್ ಕುಮಾರ್ ಬಿ., ಶ್ವೇತಾ ಶ್ರೀನಿವಾಸ್ ಸ್ಥಳಕ್ಕೆ ಬೇಟಿ ನೀಡಿದ್ದಾರೆ.ಇನ್ನೋರ್ವ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಕೆ.ಎಮ್.ಅಭಿವೃದ್ಧಿ ಅಧಿಕಾರಿ ಜೊತೆ ಮಾತನಾಡಿ ಮರವನ್ನು ಪಂಚಾಯತ್ ವತಿಯಿಂದ ತೆರವುಗೊಳಿಸುವ ಕಾರ್ಯವನ್ನು ಮಾಡಿಸಿದ್ದರು.

ಸ್ಥಳೀಯರಾದ ಶ್ರೀನಿವಾಸ್ ಬೆರ್ಕೆತ್ತೋಡಿ, ಗ್ರಾಮಸ್ಥರು ತೆರವುಗೊಳಿಸುವ ಸಂದರ್ಭದಲ್ಲಿ ಸಹಕರಿಸುತ್ತಿದ್ದಾರೆ.

Exit mobile version