ಉಜಿರೆ :ಎಸ್. ಡಿ. ಎಂ. ಸ್ಪೋರ್ಟ್ಸ್ ಕ್ಲಬ್ ಉಜಿರೆ ಹಾಗೂ ಉಜಿರೆ ಶ್ರೀ ಧ.ಮ.ಸೆಕೆಂಡರಿ ಪ್ರೌಢ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜು.22 ರಂದು ಒಂದು ದಿನದ ಕಾರ್ಯಗಾರ ನಡೆಯಿತು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ದೀಪ ಬೆಳಗಿಸಿ ಕಾರ್ಯಾಗಾರವನ್ನು ಉದ್ಘಾಟಿಸಿ ಹೊಸ ಹೊಸ ಕ್ರೀಡೆಗಳ ಬಗ್ಗೆ ಇಂತಹ ಕಾರ್ಯಗಾರ ನಡೆಸುವುದು ಬಹಳಷ್ಟು ಪ್ರಸ್ತುತ ಎಂದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ವಹಿಸಿ ವಿದ್ಯಾರ್ಥಿಗಳಿಗೆ ಶುಭವನ್ನ ಹಾರೈಸಿದರು.ಎಸ್.ಡಿ.ಎಂ.ಕ್ರೀಡಾ ಸಂಘದ ಅಧ್ಯಕ್ಷ ರಮೇಶ್ ಸ್ವಾಗತಿಸಿದರು.ಬೆಳಾಲು ಶ್ರೀ ಧ.ಮ.ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಾನಂದ ವಂದಿಸಿದರು.ವಾಲಿಬಾಲ್ ತರಬೇತಿದಾರ ಸುದೀನ್ ಕಾರ್ಯಕ್ರಮವನ್ನು ನಿರೂಪಿಸಿದರು.80 ವಿದ್ಯಾರ್ಥಿಗಳು ಭಾಗವಹಿಸಿದರು.ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಅಂತರಾಷ್ಟ್ರೀಯ ಜಂಪ್ ರೋಪ್ ಕ್ರೀಡಾಪಟು ಅಭಿಷೇಕ್ ಪವಾರ್ ನಡೆಸಿಕೊಟ್ಟರು.