Site icon Suddi Belthangady

ಕಳಿಯ ಗ್ರಾ.ಪಂ ನಲ್ಲಿ ಗೃಹಲಕ್ಷ್ಮೀ ಯೋಜನೆಗೆ ರಜಾ ದಿನದಲ್ಲೂ ನೋಂದಾವಣೆ

ಕಳಿಯ: ಕರ್ನಾಟಕ ಸರಕಾರದ ಮಹತ್ವಪೂರ್ಣ ಯೋಜನೆಗಳಲ್ಲೊಂದಾದ ಮನೆಯ ಯಾಜಮಾನಿಗೆ ಮಾಸಿಕ ಎರಡು ಸಾವಿರ ರೂಪಾಯಿ ನೀಡುವ “ಗೃಹಲಕ್ಷ್ಮಿ” ಯೋಜನೆಯ ನೋಂದಾವಣೆಯು ಕಳಿಯ ಗ್ರಾಮ ಪಂಚಾಯತ್ ನಲ್ಲಿ ರಜಾ ದಿನದಲ್ಲೂ ನಡೆಯಿತು.

ಸುಮಾರು 150 ಕ್ಕೂ ಮಿಕ್ಕಿ ಫಲಾನುಭವಿಗಳು ಈ ದಿನ ನೋಂದಾಯಿಸಿಕೊಂಡರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ.ಕೆ ಉಪಸ್ಥಿತರಿದ್ದರು.ಅಭಿವೃದ್ದಿ ಅಧಿಕಾರಿ ಸಂತೋಷ್ ಪಾಟೀಲ್ ಹಾಗೂ ಡಾಟಾ ಅಪರೇಟರ್ ಸುಚಿತ್ರಾ ನೋಂದಣಿಗಾರರಾಗಿ, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್, ಮರೀಟಾ ಪಿಂಟೋ, ಲತೀಫ್ ಪರಿಮ, ಇಂದಿರಾ, ಶ್ವೇತಾ ಹಾಗೂ ಸಿಬ್ಬಂದಿಗಳಾದ ಶಶಿಕಲಾ, ಪ್ರಮೀಳಾ, ನಂದಿನಿ ರೈ ಸಹಕರಿಸಿದರು.

Exit mobile version