ಕುಪ್ಪೆಟ್ಟಿ: ಮುಗೆರಡ್ಕ-ಗುರುವಾಯನಕೆರೆ ನೀರಾವರಿ ಯೋಜನೆಯ ಪೈಪ್ ಲೈನ್ ಆದ ಸ್ಥಳದಲ್ಲಿ ಲಾರಿಯ ಟಯರ್ ಹೂತುಹೋಗಿದೆ. ಕೋಳಿಯ ಆಹಾರ ಸಾಗಿಸುವ ಲಾರಿ ಕುಪ್ಪೆಟ್ಟಿ ರಸ್ತೆಯಿಂದ ಒಳರಸ್ತೆಗೆ ಸಾಗಲು ಟರ್ನ್ ತೆಗೆದುಕೊಂಡ ವೇಳೆ ಟಯರ್ ಹೂತುಹೋಗಿದೆ.
ಇದು ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ. ಇಲ್ಲಿ ಸೇರಿರುವ ಸಾರ್ವಜನಿಕರು ಪೈಪ್ ಲೈನ್ ಮಾಡಿದ ನಂತರ ಅವುಗಳನ್ನು ಮುಚ್ಚುವಾಗ ಸರಿಯಾದ ಕ್ರಮಕೈಗೊಂಡಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾರಿ ಹೊರತೆಗೆಯಲು ಜೆಸಿಬಿ, ಕ್ರೇನ್ ಬಳಕೆ:
ಪೈಪ್ ಲೈನ್ ಹೊಂಡದಲ್ಲಿ ಹೂತು ಹೋಗಿದ್ದ ಲಾರಿಯನ್ನು ಹೊರತೆಗೆಯಲು ಜೆಸಿಬಿ ಮತ್ತು ಕ್ರೇನ್ ಬಳಕೆ ಮಾಡಲಾಯಿತು. ಈ ವೇಳೆ ಟ್ರಾಫಿಕ್ ಜಾಮ್ ಉಂಟಾಗಿದೆ.