Site icon Suddi Belthangady

ಕೊಕ್ಕಡ: ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ದಂತ ಚಿಕಿತ್ಸಾ ಶಿಬಿರ

ಕೊಕ್ಕಡ: ಜುಲೈ 30ರಂದು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಗಣೀಶ ಕಲಾಮಂದಿರದಲ್ಲಿ ಸಾರ್ವಜನಿಕರಿಗೆ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದವತಿಯಿಂದ ಹಾಗೂ ಕೆ.ವಿ.ಜಿ. ವೈಧ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ.ಕೆ.ವಿ.ಜಿ. ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಲಿದೆ.

ಸಾರ್ವಜನಿಕರು ಬೆಳಗ್ಗೆ 9ರಿಂದ 10ಗಂಟೆಯ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ದೇವಾಲಯದ ವ್ಯವಸ್ಥಾಪನ ಸಮಿತಿಯು ತಿಳಿಸಿರುತ್ತಾರೆ.

ಶಿಬಿರದಲ್ಲಿ ದೊರಕುವ ಸೌಲಭ್ಯಗಳು: ಜನರಲ್ ಮೆಡಿಸಿನ್ ವಿಭಾಗ: ಶಸ್ತ್ರಚಿಕಿತ್ಸಾ ವಿಭಾಗ: ಮಕ್ಕಳ ರೋಗ ವಿಭಾಗ: ಕಿವಿ, ಮೂಗು, ಗಂಟಲು ರೋಗ ವಿಭಾಗ: ನೇತ್ರ ಚಿಕಿತ್ಸಾ ವಿಭಾಗ: ಚರ್ಮ ಮತ್ತು ಲೈಂಗಿಕ ರೋಗ ವಿಭಾಗ: ಸ್ತ್ರೀ ರೋಗ ವಿಭಾಗ: ಎಲುಬು ಮತ್ತು ಕೀಲು ವಿಭಾಗ: ದಂತ ಚಿಕತ್ಸಾ ವಿಭಾಗ ಮತ್ತು ಆಯುರ್ವೇದ ಮಹಾವಿದ್ಯಾಲಯದ ಇತರ ಸೌಲಭ್ಯಗಳು ಲಭ್ಯವಿರುತ್ತದೆ.

Exit mobile version