ಅಳದಂಗಡಿ:ಇತ್ತೀಚೆಗೆ ಸುರಿದ ಭಾರಿ ಮಳೆಗೆ ಸುಲ್ಕೇರಿಮೊಗ್ರು ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯದ ಮೇಲ್ಚಾವಣಿ ಕುಸಿದು ಬಿದ್ದಿದ್ದು ವಿದ್ಯಾರ್ಥಿಗಳಿಗೆ ಬಹಳ ಅನಾನುಕೂಲವಾಗಿತ್ತು.ಶಾಲಾ ಅಭಿವೃದ್ಧಿ ಸಮಿತಿಯ ಮನವಿಯ ಮೇರೆಗೆ ಜು.23ರಂದು ಗುರುವಾಯನಕೆರೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಚಾವಣಿಯ ಉಳಿದ ಹಂಚು ತೆರವು ಕಾರ್ಯ ಹಾಗೂ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.
ಸ್ವಯಂಸೇವಕರಾದ ಸಂಯೋಜಕ ಶ್ರೀಕಾಂತ್ ಪ್ರಕಾಶ್ ಕೊಲ್ಲಂಗೆ, ರವಿಚಂದ್ರ ಘಟಕ ಪ್ರತಿನಿಧಿ ಶಕುಂತಲಾ, ನಮಿತಾ, ನಳಿನಿ, ಅಮಿತಾ, ರೂಪಶ್ರೀ ಹಾಗೂ ಸ್ಥಳೀಯರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಜಡಿ ಮಳೆಯನ್ನು ಲೆಕ್ಕಿಸದೆ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.
ಶಾಲೆಯ ವತಿಯಿಂದ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಓಂಕಾರ್ ಜೈನ್ ಅಳದಂಗಡಿ ಇವರು ಗೋಡೆಗೆ ನೀರು ಬೀಳದಂತೆ ಫ್ಲೆಕ್ಸ್ ನೀಡಿದರು. ಅಧ್ಯಾಪಕರಾದ ಶ್ರೀ ನಾಗಭೂಷಣ್ ಅವರು ಸಹ ಕಾರಕ್ಕಾಗಿ ಧನ್ಯವಾದ ಅರ್ಪಿಸಿದರು